ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಬಗ್ಗೆ ಅವಹೇಳನಾಕಾರಿಯಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾತಾನಾಡಿದ ಕಾರಣ ಚಾಮಾರಾಜಪೇಟೆ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಚಾಮಾರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಈ ಬಗ್ಗೆ ನೀಡಿರುವ ದೂರಿನ ಆಧಾರದ ಮೇರೆಗೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಐಪಿಸಿ ಸೆಕ್ಷನ್120 (B) ಒಳಸಂಚು, 504 ನಕಲಿ ದಾಖಲೆ, 506 ಬೆದರಿಕೆ, 463, 465 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪವೇನು...?
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಬೆಳಕಿಗೆ ಬರ್ತಿದ್ದ ಹಾಗೆ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಬಗ್ಗೆ ಬಹಳ ಅವಹೇಳನಕಾರಿ ಮಾತಾಡಿದ್ದರಂತೆ. ಹಾಗೆ ಪ್ರಕರಣದಲ್ಲಿ ಅನಗತ್ಯವಾಗಿ ಹೆಸರನ್ನ ತಂದಿದ್ದಾರೆ. ಜಮೀರ್ ಅಹ್ಮದ್ ಶ್ರೀಲಂಕಾದ ಕೆಸಿನೋಗೆ ತೆರಳಿದ್ದಾರೆ. ಹಾಗೆ ಬಂಧಿತ ಆರೋಪಿಗಳ ಜೊತೆ ಜಮೀರ್ ಸಂಪರ್ಕ ಹೊಂದಿದ್ದಾರೆ ಎಂದು ಹೀಗೆ ಹಲವಾರು ವಿಚಾರಗಳ ಬಗ್ಗೆ ಆರೋಪ ಮಾಡಿದ್ರು.
ಇದೆಲ್ಲಾ ಸುಳ್ಳು. ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಚಾಮರಾಜಪೇಟೆ ಠಾಣೆಯಲ್ಲಿ ಜಮೀರ್ ಅಹ್ಮದ್ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಮೊದಲು ಎನ್ಸಿಆರ್ ದಾಖಲಿಸಿದ್ದರು. ಅದನ್ನು ಸದ್ಯ ಎಫ್ಐಆರ್ಗೆ ಬದಲಾಯಿಸಿ ಮಾಡಿ ತನಿಖೆ ಮುಂದುವರೆಸಿದ್ದೇವೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.