ಕರ್ನಾಟಕ

karnataka

ETV Bharat / state

ನಿವೇಶನ ಕಬಳಿಕೆ ಆರೋಪ.. ಕಾಂಗ್ರೆಸ್​​ ಶಾಸಕ ಜಮೀರ್ ಅಹಮದ್​ ವಿರುದ್ಧ ಎಫ್ಐಆರ್ ದಾಖಲು

2015ರಲ್ಲಿ ಚೊಕ್ಕನಹಳ್ಳಿ ಬಡಾವಣೆಯಲ್ಲಿರುವ ನಿವೇಶನವನ್ನು ಶಾಹೀತಾ ನಾಸೀನ್ ಅವರು ಜಮೀರ್ ಕುಟುಂಬಸ್ಥರಿಂದ ಖರೀದಿ ಮಾಡಿದ್ದರು. 2018ರಲ್ಲಿ ಜಮೀರ್ ಕುಟುಂಬಸ್ಥರಿಂದಲೇ ಮತ್ತೊಂದು ಸೈಟ್ ಖರೀದಿಸಿದ್ದರು. ನಿವೇಶನ ಖರೀದಿಸಿ ಕೆಲ ವರ್ಷಗಳಾದರೂ ಸೈಟ್​​ಗಳ ಕಡೆ ಗಮನ ಹರಿಸಿರಲಿಲ್ಲ..

fir-against-mla-zameer-ahmed-khan
ಕಾಂಗ್ರೆಸ್​​ ಶಾಸಕ ಜಮೀರ್ ಅಹಮದ್​ ವಿರುದ್ಧ ಎಫ್ಐಆರ್ ದಾಖಲು

By

Published : Feb 20, 2022, 6:47 PM IST

Updated : Feb 20, 2022, 7:33 PM IST

ಬೆಂಗಳೂರು :ನಿವೇಶನ ಕಬಳಿಕೆಗೆ ಯತ್ನಿಸಿರುವುದಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕುಟುಂಬಸ್ಥರ ವಿರುದ್ಧ ಆರೋಪ‌ ಕೇಳಿ ಬಂದಿದೆ. ಈ ಸಂಬಂಧ‌ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಜೆ.ಸಿ.ನಗರ ನಿವಾಸಿ ಶಾಹೀತಾ ನಾಸೀನ್ ಎಂಬುವರು ಜಮೀರ್​ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಶಾಸಕ ಜಮೀರ್ ಅಹಮದ್ ಹಾಗೂ ಅವರ ಸಹೋದರ ಜಮೀಲ್ ಅಹಮದ್ ಅವರು ನಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು.‌ ಇದನ್ನು ಪ್ರಶ್ನಿಸಿದರೆ ಜಮೀರ್​​ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು.

ವಾದ-ಪ್ರತಿವಾದ ಆಲಿಸಿದ 7ನೇ ಎಸಿಎಂಎ ನ್ಯಾಯಾಲಯವು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಇದರ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್‌ ಖಾನ್‌ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಶಾಸಕ ಜಮೀರ್ ಅಹಮದ್​ ವಿರುದ್ಧ ಎಫ್ಐಆರ್

ಇದನ್ನೂ ಓದಿ:ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಆಘಾತ: ಅಶ್ವಿನಿ ಪುನೀತ್​ ರಾಜ್​ಕುಮಾರ್​ ತಂದೆ ನಿಧನ

2015ರಲ್ಲಿ ಚೊಕ್ಕನಹಳ್ಳಿ ಬಡಾವಣೆಯಲ್ಲಿರುವ ನಿವೇಶನವನ್ನು ಶಾಹೀತಾ ನಾಸೀನ್ ಅವರು ಜಮೀರ್ ಕುಟುಂಬಸ್ಥರಿಂದ ಖರೀದಿ ಮಾಡಿದ್ದರು. 2018ರಲ್ಲಿ ಜಮೀರ್ ಕುಟುಂಬಸ್ಥರಿಂದಲೇ ಮತ್ತೊಂದು ಸೈಟ್ ಖರೀದಿಸಿದ್ದರು. ನಿವೇಶನ ಖರೀದಿಸಿ ಕೆಲ ವರ್ಷಗಳಾದರೂ ಸೈಟ್​​ಗಳ ಕಡೆ ಗಮನ ಹರಿಸಿರಲಿಲ್ಲ.

ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್, ಮತ್ತೆ ಇವರಿಂದಲೇ ಸೈಟ್​​ಗಳನ್ನು ಕಬಳಿಸಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಕುಟುಂಬಕ್ಕೆ ಶಾಸಕರ ಬೆಂಬಲಿಗರಿಂದ ಜೀವ ಬೆದರಿಕೆ ಹಾಕಿದ್ದರು ಎಂದು ಶಾಹೀತಾ ಆರೋಪಿಸಿದ್ದರು. ಸದ್ಯ‌ ಸಂಪಿಗೆಹಳ್ಳಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Last Updated : Feb 20, 2022, 7:33 PM IST

ABOUT THE AUTHOR

...view details