ಬೆಂಗಳೂರು :ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ (cow slaughter prohibition act) ಜಾರಿಯಾಗಿದ್ದರೂ ಕೂಡ ಗೋಪಾಷ್ಟಮಿ ದಿನದಂದು ಗೋರಿಪಾಳ್ಯದಲ್ಲಿ ಗೋವಧೆಯಾಗಿದೆ (cow slaughter) ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಗೋವಧೆ ತಡೆಯಯುವಲ್ಲಿ ಜೆಜೆನಗರ (JJ Nagara) ಪೊಲೀಸರು ವಿಫಲರಾಗಿದ್ದಾರೆ. ಠಾಣೆ ಸಮೀಪವೇ ದನ, ಕರು, ಜಾನುವಾರು ಮಾಂಸ ಮಾರಾಟ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೋ ಗ್ಯಾನ್ ಪ್ರತಿಷ್ಠಾನ ಆರೋಪಿಸಿತ್ತು.
ಘಟನೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಲಾಗಿದೆ. ಈ ಬಗ್ಗೆ ಕಟುಕರಿಗೆ ಮಾಹಿತಿ ಸೋರಿಕೆಯಾಗಿ, ಅವರು ಪ್ರದೇಶವನ್ನು ತೆರವುಗೊಳಿಸಿದ್ದಾರೆ. ಅಲ್ಲದೆ, ಪೊಲೀಸರು ಗೋರಿಪಾಳ್ಯಕ್ಕೆ ತೆರಳಿ 40-50 ಹಸುಗಳಲ್ಲಿ ಕೇವಲ ಮೂರನ್ನು ಮಾತ್ರ ರಕ್ಷಿಸಿದ್ದಾರೆ.