ಬೆಂಗಳೂರು: ವಿದೇಶದಲ್ಲಿ ನೌಕರಿ ಅಮಿಷ ಒಡ್ಡಿ ಉದ್ಯೋಗ ಆಕಾಂಕ್ಷಿಗಳಿಗೆ ವಂಚಿಸುತ್ತಿದ 51 ಆರೋಪಿಗಳ ವಿರುದ್ಧ ಕೋರಮಂಗಲ ಠಾಣೆಗೆ ದೂರು ನೀಡಲಾಗಿದೆ.
ಕೊರಮಂಗಲದ ಎಫ್ ಆರ್ ಆರ್ ಓ ಪ್ರಾದೇಶಿಕ ಕಚೇರಿ ಅಧಿಕಾರಿ ಐ ಎಸ್ ಎಫ್ ಸುಧಾಮ್ ಸಿಂಗ್ ದೂರು ನೀಡಿದ್ದಾರೆ. ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯವ್ಯಾಪಿ ವಿಸ್ತರಿಸುವ ನಕಲಿ ಏಜೆನ್ಸಿ ಮತ್ತು ವ್ಯಕ್ತಿಗಳು ಒಳಗೊಂಡು 51 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಮಿಗ್ರೇಷನ್ ಕಾಯ್ದೆ 1983ರಡಿ ವಿದೇಶಗಳಲ್ಲಿ ಕೆಲಸ ಕೊಡಿಸುವ ಪ್ರಕ್ರಿಯೆಗೆ ಪರವಾನಿಗೆ ಪಡೆಯೆಬೇಕು. ರಾಜ್ಯ ಮತ್ತು ದೇಶದಿಂದ ವಿದೇಶಕ್ಕೆ ಕೆಲಸಕ್ಕೆ ಕಳುಹಿಸುವ ನೌಕರರ ಮಾಹಿತಿಯನ್ನು ಸಲ್ಲಿಸಬೇಕು. ಕೆಲವರು ಎಫ್ ಆರ್ ಆರ್ ಓಯಿಂದ ಅನುಮತಿ ಪಡೆಯೆದೆ. ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಮಾಡಿಕೊಂಡು ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವಿವಿಧ ಶುಲ್ಕದ ರೂಪದಲ್ಲಿ ಹಣ ಪಡೆದು ಮೊಸಮಾಡುತ್ತಿದರು. ಈ ಕುರಿತು ರಾಜ್ಯವ್ಯಾಪಿ ಸಾಕಷ್ಟು ದೂರುಗಳು ಬಂದಿವೆ. ಉದ್ಯೋಗ ಆಕಾಂಕ್ಷಿಗಳಿಗೆ ಶುಲ್ಕ ಪಾವತಿ ಮಾಡಿದರೆ ಅವರಿಗೆ ಬೇಕಾದ ಪಾಸ್ಪೋರ್ಟ್, ವೀಸಾ ಎಲ್ಲವನ್ನು ಒದಗಿಸುವುದಾಗಿ ಆಸೆ ಹುಟ್ಟಿಸುತ್ತಿದರು. ಬಳಿಕ ಹಣ ಪಡೆದು ಸಂಪರ್ಕಕ್ಕೆ ಸಿಗದೆ ಮೋಸ ಮಾಡುತ್ತಿದ್ದರು. ಇನ್ನು ಕೆಲವರಿಗೆ ಹಣ ಪಡೆದು ವಿದೇಶಕ್ಕೆ ಕಳುಹಿಸಿ ಅರ್ಧದಲ್ಲಿ ಕೈಬಿಟ್ಟಿರುವ ಸಾಕಷ್ಟು ದೂರುಗಳು ಬಂದಿವೆ.
ಈ ದೂರುಗಳ ಮೇಲೆ ಆಂತರಿಕ ತನಿಖೆ ನೆಡೆಸಿ 51 ಆರೋಪಿಗಳನ್ನು ಗುರುತಿಸಿರುವುದಾಗಿ ಅಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.