ಕರ್ನಾಟಕ

karnataka

ETV Bharat / state

ಗೃಹ ಇಲಾಖೆಯಲ್ಲಿ ನೌಕರಿ ಆಮಿಷ : 55 ಜನರಿಗೆ 1.62 ಕೋಟಿ ವಂಚನೆ ಮೂವರ ವಿರುದ್ಧ FIR - ಧಾನ ಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕುಮಾರಸ್ವಾಮಿ ಲೇಔಟ್ ನಿವಾಸಿ ಕೆ.ಜಿ.ಮಂಜುನಾಥ್ ಎನ್ನುವವರು ದೂರು ನೀಡಿದ್ದು, ಇದರನ್ವಯ ಶ್ರೀಲೇಖಾ, ರಾಧಾ ಉಮೇಶ್ ಮತ್ತು ಸಂಪತ್‌ಕುಮಾರ್‌ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.

55 ಜನರಿಗೆ 1.62 ಕೋಟಿ ವಂಚನೆ ಮೂವರ ವಿರುದ್ಧ FIR
55 ಜನರಿಗೆ 1.62 ಕೋಟಿ ವಂಚನೆ ಮೂವರ ವಿರುದ್ಧ FIR

By

Published : Sep 29, 2021, 1:01 PM IST

ಬೆಂಗಳೂರು: ಗೃಹ ಇಲಾಖೆಯಲ್ಲಿ ಸಹಾಯಕ ಹುದ್ದೆಗಳನ್ನು ಕೊಡಿಸುವುದಾಗಿ 55 ಜನರಿಂದ 1.62 ಕೋಟಿ ರೂ ವಂಚಿಸಲಾಗಿದ್ದು, ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಕುಮಾರಸ್ವಾಮಿ ಲೇಔಟ್ ನಿವಾಸಿ ಕೆ.ಜಿ.ಮಂಜುನಾಥ್ ಎನ್ನುವವರು ದೂರು ನೀಡಿದ್ದು, ಇದರನ್ವಯ ಶ್ರೀಲೇಖಾ, ರಾಧಾ ಉಮೇಶ್ ಮತ್ತು ಸಂಪತ್‌ಕುಮಾರ್‌ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.

ವಂಚನೆ ಮಾಡಲು ವಿಧಾನಸೌಧವೇ ಅಡ್ಡಾ :

ವಂಚನೆ ಮಾಡಲು ಆರೋಪಿಗಳು ವಿಧಾನಸೌಧವನ್ನೇ ಅಡ್ಡಾ ಮಾಡಿಕೊಂಡಿದ್ದರು. ಅಧಿಕಾರಿಗಳನ್ನು ತೋರಿಸಿ ನಕಲಿ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದರು. ಗೃಹ ಇಲಾಖೆಯಲ್ಲೇ ನೌಕರಿ ಆಮಿಷ ಒಡ್ಡಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಮಂಜುನಾಥ್‌ಗೆ 2019ರ ಮಾರ್ಚ್‌ನಲ್ಲಿ ರಾಧಾ ಉಮೇಶ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದಳು. ವಿಧಾನಸೌಧದಲ್ಲಿ ತನಗೆ ಅಧಿಕಾರಿಗಳು ಪರಿಚಯವಿದ್ದು, ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷ ರೂ ಕೇಳಿದ್ದಳು ಎಂದು ಹೇಳಿದ್ದಾರೆ.

ಆಕೆಯನ್ನು ನಂಬಿದ ಮಂಜುನಾಥ್ 4 ಕಂತುಗಳಲ್ಲಿ 15 ಲಕ್ಷ ರೂ ನೀಡಿದ್ದರು. ಆನಂತರ ಶ್ರೀಲೇಖಾ ಎಂಬಾಕೆ ಭೇಟಿಯಾಗಿ ಏಜೆನ್ಸಿ ಬೇಡ ಗೃಹ ಇಲಾಖೆಯಲ್ಲಿ ಕಿರಿಯ, ಹಿರಿಯ ಮತ್ತು ಅಧೀಕ್ಷರ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದೆ. ಕೆಲಸ ಕೊಡಿಸುವುದಾಗಿ ಹೇಳಿದ್ದಳು. ಆಕೆಯ ಮಾತು ನಂಬಿ 55 ಉದ್ಯೋಗಾಕಾಂಕ್ಷಿಗಳಿಂದ ಒಟ್ಟು 1.61 ಕೋಟಿ ರೂ ಸಂಗ್ರಹಿಸಿ ಹಂತಹಂತವಾಗಿ ಮಂಜುನಾಥ್ ಕೊಟ್ಟಿದ್ದರು. ಆಗ ಆರೋಪಿಗಳು ನೇಮಕಾತಿ ಆದೇಶ ಪತ್ರ ಕೂಡ ನೀಡಿದ್ದರು ಎಂದಿದ್ದಾರೆ.

ಆರ್ಥಿಕ ಇಲಾಖೆಯಲ್ಲಿ ಸತ್ಯ ಬಹಿರಂಗ: ಸೆಪ್ಟೆಂಬರ್ 24ರಂದು ವಿಧಾನಸೌಧದ ಆರ್ಥಿಕ ಇಲಾಖೆಗೆ ಹೋಗಿ ನೇಮಕಾತಿ ಆದೇಶ ಪತ್ರವನ್ನು ನೀಡಿದಾಗ ನಕಲಿ ಎಂಬ ಸತ್ಯ ಗೊತ್ತಾಗಿದೆ.

ABOUT THE AUTHOR

...view details