ಕರ್ನಾಟಕ

karnataka

ETV Bharat / state

ಪೊಲೀಸರ​ ಬದಲು ದಂಡ ವಸೂಲಿ ಮಾಡಿದ ಟೋಯಿಂಗ್​ ಬಾಯ್​, ರೆಸಿಪ್ಟ್​ ಕೊಡದೆ ಕಿರಿಕ್​! ಏನಿವರ ಕಥೆ? - ಆರ್ ಟಿ ನಗರ ಸಂಚಾರಿ ಪೊಲೀಸ್​ ಠಾಣೆ

ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸರು ದಂಡ ಹಾಕೋದು ಮಾಮೂಲಿ. ಆದರೆ ಟೋಯಿಂಗ್​ ಬಾಯ್​ ದಂಡ ಹಾಕಿರುವ ಪ್ರಸಂಗ ಈಗ ಬೆಳಕಿಗೆ ಬಂದಿದೆ.

ಇಲ್ಲಿ ಟೋಯಿಂಗ್​ ಬಾಯ್ ಕೇಸ್ ಚೆಕ್ ಮಾಡ್ತಾರೆ

By

Published : Nov 13, 2019, 6:24 PM IST

ಬೆಂಗಳೂರು:ಟ್ರಾಫಿಕ್ ಪೊಲೀಸರು ವಾಹನ ಸವಾರರು ರೂಲ್ಸ್ ಬ್ರೆಕ್ ಮಾಡಿದಾಗ ಫೈನ್ ಹಾಕೋದು ಮಾಮೂಲಿ, ಆದ್ರೆ ಆರ್ ಟಿ ನಗರ ಸಂಚಾರ ಎಎಸ್ಐ ಜಯಪ್ರಕಾಶ್ ಫೈನ್ ಹಾಕೋ ಯಂತ್ರವನ್ನು ಟೋಯಿಂಗ್​ ಬಾಯ್​ ಕೈಗೆ ಕೊಟ್ಟು ಅವಂತಾರ ಸೃಷ್ಟಿಸಿರುವ ಘಟನೆ ನಡೆದಿದೆ.

ಇಲ್ಲಿ ಟೋಯಿಂಗ್​ ಬಾಯ್ ಕೇಸ್ ಚೆಕ್ ಮಾಡ್ತಾರೆ

ಈ ಟೋಯಿಂಗ್​ ಬಾಯ್​ ವಾಹನ ಸವಾರರಿಂದ ದಂಡ ವಸೂಲಿ ಮಾಡಿ ರೆಸಿಪ್ಟ್ ಕೊಡದೆ ಕಿರಿಕ್ ಮಾಡಿದ್ದಾನೆ. ಹೆಬ್ಬಾಳ ಬಳಿಯ ಬ್ಯಾಪಿಸ್ಟ್ ಆಸ್ಪತ್ರೆ ಬಳಿ ನೋ ಪಾರ್ಕಿಂಗ್​ನಲ್ಲಿ ಕಿರಣ್ ಮೂರ್ತಿ ಬೈಕ್ ನಿಲ್ಲಿಸಿದ್ರು. ಇದನ್ನ‌ ಆರ್.ಟಿ.ನಗರ ಸಂಚಾರ ಪೊಲೀಸರು ಟೋಯಿಂಗ್ ಮಾಡಿ ತೆಗೆದುಕೊಂಡು ಹೋಗಿದ್ದರು.

ಬಳಿಕ ಬೈಕ್ ವಾಪಸ್ ಕೇಳಲು ಕಿರಣ್ ಮೂರ್ತಿ ಹೋದಾಗ ಟೋಯಿಂಗ್ ಬಾಯ್ 1600 ರೂಪಾಯಿ ಫೈನ್ ಕಟ್ಟುವಂತೆ ಹೇಳಿದ್ದಾನೆ. ಈ ವೇಳೆ ಕಿರಣ್ 2 ಸಾವಿರ ನೋಟು ಕೊಟ್ಟಾಗ 1200 ರೂಪಾಯಿಗೆ 1000‌ ಹಣ ಪಡೆದು ಬಿಲ್ ನೀಡದೆ ಕಿರಿಕ್ ಮಾಡಿದ್ದಾನೆ. ಸದ್ಯಘಟನೆಯ ವಿಡಿಯೋ ವೈರಲ್ ಆಗಿದ್ದು ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಬೈಕ್​ ಸವಾರ ಕಿರಣ್ ಆರೋಪಿಸಿದ್ದಾರೆ.

ABOUT THE AUTHOR

...view details