ಬೆಂಗಳೂರು:ಜೂನ್ ತಿಂಗಳಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಬೆಳೆಸಿದ 5,827 ಪ್ರಯಾಣಿಕರಿಗೆ ನಿಗಮದ ತನಿಖಾ ತಂಡ ದಂಡ ವಿಧಿಸಿದೆ.
ಟಿಕೆಟ್ ರಹಿತ ಪ್ರಯಾಣ: ಜೂನ್ ತಿಂಗಳಲ್ಲಿ ಕೆಎಸ್ಆರ್ಟಿಸಿ ವಸೂಲಿ ಮಾಡಿದ ದಂಡ ಇಷ್ಟು! - undefined
ಕೆಎಸ್ಆರ್ಟಿಸಿ ಬಸ್ನಲ್ಲಿ ಟಿಕೆಟ್ ಇಲ್ಲದೇ ಜೂನ್ ತಿಂಗಳಲ್ಲಿ ಪ್ರಯಾಣಿಸಿದ 5,827 ಪ್ರಯಾಣಿಕರಿಂದ ಸುಮಾರು 7,56,661 ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.
![ಟಿಕೆಟ್ ರಹಿತ ಪ್ರಯಾಣ: ಜೂನ್ ತಿಂಗಳಲ್ಲಿ ಕೆಎಸ್ಆರ್ಟಿಸಿ ವಸೂಲಿ ಮಾಡಿದ ದಂಡ ಇಷ್ಟು!](https://etvbharatimages.akamaized.net/etvbharat/prod-images/768-512-3868343-thumbnail-3x2-bng.jpg)
ನಿಗಮದ ತನಿಖಾ ತಂಡಗಳಿಂದ ತಪಾಸಣೆ ನಡೆಸಿದ್ದು, ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 42,469 ವಾಹನಗಳನ್ನು ತನಿಖೆಗೊಳಪಡಿಸಿದಾಗ ಬರೋಬ್ಬರಿ 4,673 ಪ್ರಕರಣಗಳನ್ನು ಪತ್ತೆ ಹಚ್ಚಿ 5,827 ಟಿಕೆಟ್ ರಹಿತ ಪ್ರಯಾಣಿಕರಿಂದ 7,56,661 ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.
ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 99,570 ರೂಪಾಯಿಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ ಅಂತಾ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಬಸ್ನಲ್ಲಿ ಪ್ರಯಾಣಿಸುವಾಗ ಟಿಕೆಟ್, ಪಾಸ್ ಪಡೆದು ಪ್ರಯಾಣ ಮಾಡುವಂತೆ ಸಂಸ್ಥೆಯು ಈ ಮೂಲಕ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.