ಬೆಂಗಳೂರು:ಕೋವಿಡ್-19 ಮಹಾಮಾರಿ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗೆಡಿಗಳು ವಿನಾ ಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾರಣ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಇದಕ್ಕೆ ಕಡಿವಾಣ ಹಾಕಲು 'ಫ್ಯಾಕ್ಟ್ ಚೆಕ್ ವೆಬ್ ಸೈಟ್' ಲಾಂಚ್ ಮಾಡಿದ್ದಾರೆ.
ಫೇಕ್ ನ್ಯೂಸ್ ಹಾಕ್ತಿರಾ ಹುಷಾರ್.. ನಿಮ್ಮ ಮೇಲೆ ಕಣ್ಣಿಡಲಿದೆ ಪೊಲೀಸ್ ಇಲಾಖೆ ಫ್ಯಾಕ್ಟ್ ಚೆಕ್ - fact by police department
ಫ್ಯಾಕ್ಟ್ ಚೆಕ್ ವೆಬ್ ಸೈಟ್ಗೆ ಹೋದರೆ ಫೇಕ್ ನ್ಯೂಸ್ ಯಾವುದೆಂದು ತಿಳಿಯುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಯನ್ನೆಲ್ಲಾ ನಂಬಬೇಡಿ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
ಇದರ ಕುರಿತು ಸ್ವತಃ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿ ಫ್ಯಾಕ್ಟ್ ಚೆಕ್ ವೆಬ್ ಸೈಟ್ಗೆ ಹೋದರೆ ಫೇಕ್ ನ್ಯೂಸ್ ಯಾವುದೆಂದು ತಿಳಿಯುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಯನ್ನೆಲ್ಲಾ ನಂಬಬೇಡಿ. ಅದರಲ್ಲಿ ಎಷ್ಟು ಫೇಕ್ ಇದೆ ಎಂದು ತಿಳಿಯಲು http:factcheck.ksp.gov.in ವೆಬ್ ವಿಳಾಸಕ್ಕೆ ಭೇಟಿ ಮಾಡಲು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಇತ್ತೀಚೆಗೆ ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸೋದು ಹಾಗೂ ಕೊರೊನಾ ಕುರಿತು ಜನರು ಭಯಭೀತರನ್ನಾಗಿ ಮಾಡುವ ಕಿಡಿಗೇಡಿಗಳು ಹೆಚ್ಚುತ್ತಿದ್ದಾರೆ. ಹೀಗಾಗಿ ಜನರಿಗೆ ಸತ್ಯಾಸತ್ಯತೆ ತಿಳಿಯಲು ಪ್ರವೀಣ್ ಸೂದ್ ಅವರು ಈ ವೆಬ್ ಸೈಟ್ ಪರಿಚಯಿಸಿದ್ದಾರೆ.