ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯಡಿ 8ನೇ ಕಂತಿನ ಹಣಕಾಸಿನ ನೆರವನ್ನು ಬಿಡುಗಡೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದರು.
ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ರಾಜ್ಯದ 55.36 ಲಕ್ಷ ರೈತರ ಖಾತೆಗಳಿಗೆ ಪ್ರಸಕ್ತ ವರ್ಷದ ಮೊದಲ ಕಂತು ಒಟ್ಟು 985.61 ಕೋಟಿ ರೂ. ವರ್ಗಾವಣೆಗೊಂಡಿದೆ ಎಂಬ ಮಾಹಿತಿ ನೀಡಲಾಯಿತು. ಪಿಎಂ ಕಿಸಾನ್ ಯೋಜನೆ ಅಡಿ ಇರುವ ಹಲವು ಅನುಕೂಲತೆಗಳ ಕುರಿತು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಓದಿ:ಕೋವಿಡ್ ಮಹಾಮಾರಿಗೆ 5 ತಿಂಗಳ ಮಗು ಬಲಿ; ಹೆಚ್ಚಿದ ಆತಂಕ
ದೇಶಾದ್ಯಂತ ಹತ್ತು ಸಾವಿರ ರೈತ ಉತ್ಪನ್ನ ಸಂಸ್ಥೆ ತೆರೆದಿರುವ ಮಾಹಿತಿ, ರೈತ ಸಮ್ಮಾನ್ ಯೋಜನೆ ಅಡಿ ಎಂಟನೇ ಕಂತಿನ ಅನುದಾನವಾದ 9.5 ಕೋಟಿ ರೂ. ರೈತ ಸಮುದಾಯಕ್ಕೆ ಹಾಗೂ ಸುಮಾರು 19 ಸಾವಿರ ಕೋಟಿ ರೂಪಾಯಿ ನೆರವು ನೇರ ನಗದು ವರ್ಗಾವಣೆ ಮಾಡುವ ವಿಚಾರವನ್ನು ಪ್ರಧಾನಿ ತಿಳಿಸಿದ್ದಾರೆ. ಸುದೀರ್ಘ ಅವಧಿ ನಡೆದ ವಿಡಿಯೋ ಕಾನ್ಫರೆನ್ಸ್ ಉದ್ದಕ್ಕೂ ಪಾಲ್ಗೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗಿಯಾಗದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಪಿ.ಸಿ.ಮೋಹನ್ ಬಿಎಸ್ವೈ ಜೊತೆಗಿದ್ದರು.