ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ವಿಧಾನ ಪರಿಷತ್ನಲ್ಲಿ ಪ್ರಸಕ್ತ ಸಾಲಿನ ಹಣಕಾಸು ವಿಧೇಯಕ ಮಂಡಿಸಿದರು. ವಿಧಾನ ಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆದ ವಿಧೇಯಕವನ್ನು ಪರಿಷತ್ನಲ್ಲಿ ಸಿಎಂ ಮಂಡಿಸಿದರು.
ವಿಧಾನ ಪರಿಷತ್ನಲ್ಲಿ ಹಣಕಾಸು ವಿಧೇಯಕ ಮಂಡನೆ, ಅಂಗೀಕಾರ ಕೇಂದ್ರದಿಂದ ಬರಬೇಕಿರುವ ತೆರಿಗೆ ಹಣದ ಆತಂಕ ಬೇಡ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ್ದು, ಹಣ ಲಭಿಸಲಿದೆ. ನನ್ನ ಆದ್ಯತೆ ಕೃಷಿ ಮತ್ತು ನೀರಾವರಿ. ನೀರಾವರಿಗೆ ₹21 ಸಾವಿರ ಕೋಟಿ ನೀಡಿದ್ದೇನೆ. ಇದರ ಹೊರತಾಗಿ ₹10 ಸಾವಿರ ಕೋಟಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾಗಿದೆ.
ಎತ್ತಿನಹೊಳೆ ಸೇರಿದಂತೆ ವಿವಿಧ ಯೋಜನೆಗೆ ಹಣ ನೀಡಿದ್ದೇವೆ ಎಂದರು. ಲ್ಯಾಪ್ ಟ್ಯಾಪ್ ಹಗರಣ ತನಿಖೆಗೆ ಸದನ ಸಮಿತಿ ರಚಿಸಬೇಕೆಂದು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸಿಎಂಗೆ ಒತ್ತಾಯಿಸಿದರು. ಸದನ ಸಮಿತಿಗೆ ವಹಿಸಬೇಕೆಂದು ಆಗ್ರಹಿಸುತ್ತಿರುವ ಮಧ್ಯೆಯೇ ವಿಧೇಯಕ ಅಂಗೀಕರಿಸುವಂತೆ ಸಿಎಂ ಮನವಿ ಮಾಡಿ ತಮ್ಮ ಭಾಷಣ ಮುಂದುವರೆಸಿದರು.
ಸಭಾಪತಿಗಳು ವಿಧೇಯಕ ಮತಕ್ಕೆ ಹಾಕಿದರು. ಪ್ರತಿಪಕ್ಷ ಗದ್ದಲದ ನಡುವೆಯೇ ಹಣಕಾಸು ವಿಧೇಯಕ ಮಂಡನೆಯಾಗಿ ಅನುಮೋದನೆ ಪಡೆಯಿತು. ಇದೇ ಸಂದರ್ಭ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಕೂಡ ಅನುಮೋದನೆ ಪಡೆಯಿತು. ಸದನದಲ್ಲಿ ಮಂಡನೆಯಾಗಿ ಅನುಮೋದನೆ ಪಡೆದ ವಿಧೇಯಕ ಬಗ್ಗೆ ವಿವರಿಸಿದರು. 20 ದಿನ ನಡೆದ, 110 ಗಂಟೆ ಕಲಾಪ ನಡೆದಿದೆ ಎಂದು ವಿವರ ನೀಡುತ್ತಿದ್ದಂತೆ, ಸದನ ಮುಂದೂಡುವ ಲಕ್ಷಣ ಗೋಚರಿಸಿತು. ಕಾನೂನು ಸಚಿವ ಮಾಧುಸ್ವಾಮಿ ಆಗಮಿಸಿ ಆರ್ಡಿಪಿಆರ್ ಹಾಗೂ ಜಲ್ಲಿ ಕ್ರಶರ್ ಸಂಬಂಧಿಸಿದ ಎರಡು ಬಿಲ್ ಇದೆ ಪಾಸ್ ಆಗಬೇಕೆಂದು ಮನವಿ ಮಾಡಿದರು.
ಅದಕ್ಕೆ ಸಭಾಪತಿಗಳು ಅವಕಾಶ ನೀಡಲಿಲ್ಲ. ಆರ್ಡಿಪಿಆರ್ ಅಡಿ ನಿರ್ಮಿಸಿರುವ ಕುಡಿವ ನೀರಿನ ಘಟಕಗಳ ಸ್ಥಿತಿಗತಿ ಕುರಿತ ವಿಚಾರ ಹಾಗೂ ಬಿಬಿಎಂಪಿ ಕ್ಲಬ್‌ಗಳ ಅಕ್ರಮಗಳ ಪರಿಶೀಲನೆಗೆ ಸದನ ಸಮಿತಿಗೆ ವಹಿಸಲಾಯಿತು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಕಲಾಪವನ್ನು ಅನಿರ್ಧಿಷ್ಟ ಕಾಲಾವಧಿಗೆ ಮುಂದೂಡಿದರು.