ಕರ್ನಾಟಕ

karnataka

By

Published : Jan 14, 2020, 12:00 PM IST

ETV Bharat / state

ಇಂದು ಘೋಷಣೆಯಾದರೆ ಅಂತಿಮ, ಇಲ್ಲವಾದರೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮುಂದಕ್ಕೆ!

ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೀರ್ಮಾನವಾಗದಿದ್ದರೆ, ಒಂದು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇಂದು ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಸಿಎಲ್​ಪಿ, ಪ್ರತಿಪಕ್ಷದ ಪಕ್ಷದ ನಾಯಕ ಸ್ಥಾನಗಳ ಬಗ್ಗೆ ಮಹತ್ವದ ತೀರ್ಮಾನಗಳ ಕುರಿತು ಚರ್ಚಿಸಲಿದ್ದಾರೆ.

KPCC president will be chosen!
ಪ್ರತಿಪಕ್ಷದ ಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು ದಿಲ್ಲಿಯಲ್ಲಿ ನಡೆದಿದ್ದು, ಇಂದು ಅಂತಿಮ ತೀರ್ಮಾನವಾಗದಿದ್ದರೆ, ಇನ್ನೂ 15 ದಿನ ಯಾವುದೇ ಆಯ್ಕೆ ನಡೆಯುವುದಿಲ್ಲ.

ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೀರ್ಮಾನವಾಗದಿದ್ದರೆ, ಒಂದು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕಾರಣ ಆದೇಶ ಹೊರಡಿಸಬೇಕಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿದೇಶ ಪ್ರವಾಸ ಕೈಗೊಂಡಿರುವುದು. ಇಂದಿನಿಂದ 10 ದಿನ ಸೋನಿಯಾ ವಿದೇಶಕ್ಕೆ ತೆರಳಲಿದ್ದಾರೆ.

ಈ ಹಿನ್ನೆಲೆ ಸೋನಿಯಾಗಾಂಧಿ ಪ್ರವಾಸಕ್ಕೂ ಮುನ್ನವೇ ಭೇಟಿ ಮಾಡಿ ಚರ್ಚಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತೆರಳಿದ್ದಾರೆ. ಇಂದು ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಸಿಎಲ್​ಪಿ, ಪ್ರತಿಪಕ್ಷದ ಪಕ್ಷದ ನಾಯಕ ಸ್ಥಾನಗಳ ಬಗ್ಗೆ ಮಹತ್ವದ ತೀರ್ಮಾನಗಳ ಕುರಿತು ಚರ್ಚಿಸಲಿದ್ದಾರೆ.

ಇಂದಿನ ಭೇಟಿ ಸಂದರ್ಭವೇ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ , ರಾಹುಲ್ ಗಾಂಧಿ ಜೊತೆಗೆ ಮಹತ್ವದ ಸಭೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ದಿಲ್ಲಿಯಲ್ಲಿರುವ ಹಿನ್ನೆಲೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದಿಲ್ಲಿಗೆ ತೆರಳಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ, ಇವರ ಬೇರೊಬ್ಬರ ನೇಮಕಕ್ಕೆ ಸಿದ್ದರಾಮಯ್ಯ ಪ್ರಯತ್ನ ನಡೆಸುತ್ತಿದ್ದಾರೆ. ಹಿನ್ನೆಲೆ ತಾವು ಕೂಡ ಇದೇ ಸಂದರ್ಭದಲ್ಲಿ ತೆರಳುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಶಿವಕುಮಾರ್ ಬಂದಿದ್ದಾರೆ. ತಮ್ಮ ಆಪ್ತರ ಮೂಲಕ ಸೋನಿಯಾ ಗಾಂಧಿಯವರಿಗೆ ಮಾಹಿತಿ ರವಾನೆ ಮಾಡುವ ಕಾರ್ಯ ಮಾಡಿದ್ದಾರೆ.

ಇಂದು ಸಿದ್ದರಾಮಯ್ಯ ಭೇಟಿ ಸಂದರ್ಭ ಸೋನಿಯಾಗಾಂಧಿ ಖುದ್ದು ಡಿ.ಕೆ. ಶಿವಕುಮಾರ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪ ಮಾಡುವ ರೀತಿ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಈ ಕಾರಣದಿಂದಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಂದು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಸಿದ್ದರಾಮಯ್ಯ ವಾಪಸಾಗುವಾಗ ನೂತನ ಆ ದೇಶದೊಂದಿಗೆ ಹಿಂತಿರುಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ABOUT THE AUTHOR

...view details