ಬೆಂಗಳೂರು: ಮುಖ್ಯಮಂತ್ರಿ ಸೇರಿದಂತೆ ಸಚಿವರ ಬಳಿ ಒಂದು ಲಕ್ಷಕ್ಕೂ ಹೆಚ್ಚು ಕಡತ ವಿಲೇವಾರಿ ಬಾಕಿ ಇದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಲಕ್ಷಾಂತರ ಕಡತ ವಿಲೇವಾರಿ ಬಾಕಿ- ಈ ಕ್ಯಾನ್ಸರ್ಗೆ ಮೊದಲು ಚಿಕಿತ್ಸೆ ಕೊಡಿ: ಎಚ್ಕೆ ಆಗ್ರಹ - Former Minister HK Patil insists on file disposal
ವಿವಿಧ ಇಲಾಖೆಗಳಲ್ಲಿ 1 ಲಕ್ಷ 7 ಸಾವಿರ ಕಡತಗಳು ಬಾಕಿ ಉಳಿದುಕೊಂಡಿದೆ. ಈ ಕಡತಗಳ ವಿಲೇವಾರಿ ಮಾಡಲು ನಿಮಗೆ ಇನ್ನೂ ಐದು ವರ್ಷ ಬೇಕಾಗುತ್ತದೆ. ಇದು ಒಂದು ರೀತಿಯ ಕ್ಯಾನ್ಸರ್ ಇದ್ದಂತೆ. ಇದಕ್ಕೆ ಕಿಮೋತೆರಪಿ ಮಾಡ್ತಿರೋ ಏನು ಮಾಡ್ತಿರೋ ಗೊತ್ತಿಲ್ಲ. ಅದಕ್ಕೆ ಸರಿಯಾಗಿ ಟ್ರೀಟ್ಮೆಂಟ್ ಕೊಡಿಸಿ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ವೇಳೆ ಮಾತನಾಡಿ, ಸದ್ಯ ವಿವಿಧ ಇಲಾಖೆಗಳಲ್ಲಿ 1 ಲಕ್ಷ 7 ಸಾವಿರ ಕಡತಗಳು ಬಾಕಿ ಉಳಿದುಕೊಂಡಿದೆ. ಈ ಕಡತಗಳ ವಿಲೇವಾರಿ ಮಾಡಲು ನಿಮಗೆ ಇನ್ನೂ ಐದು ವರ್ಷ ಬೇಕಾಗುತ್ತದೆ ಎಂದರು.
ಕಡತ ವಿಲಾವಾರಿ ಸರಿಯಾಗಬೇಕಿದೆ. ಕಡತಗಳು ವಿಲೇವಾರಿ ಆಗಬೇಕು ಅಂದ್ರೆ ಯಾರಾದರೂ ರಾಜಕೀಯ ನಾಯಕರು ಒತ್ತಾಯ ಮಾಡಬೇಕು. ಇಲ್ಲ ಆ ಕಡತ ತೂಕ ಇರಬೇಕು. ಲಂಚವಿಲ್ಲದೇ ಒಂದು ಫೈಲ್ ಸಹ ಮೂವ್ ಆಗೋದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಡತಗಳನ್ನು ವಿಲೇವಾರಿ ಮಾಡಿದರೆ ಭ್ರಷ್ಟಾಚಾರ ಮಟ್ಟ ಶೇ 50ರಷ್ಟು ಇಳಿಕೆ ಆಗಲಿದೆ. ಇ-ಆಡಳಿತ ಬಂದರೂ ಇಷ್ಟು ಪ್ರಮಾಣದ ಕಡತ ಬಾಕಿ ಇರಬಾರದಿತ್ತು. ಕಡತ ಮೂವ್ ಮೆಂಟ್ ವ್ಯವಸ್ಥೆ ಸ್ಥಗಿತವಾಗಿದೆ ಎಂದು ಅರೋಪಿಸಿದರು. ಫೈಲ್ಗಳು ಎಲ್ಲಿ ಹೊಯಿತು ಅಂತ ಹುಡುಕುವುದಕ್ಕೂ ಸಾಧ್ಯವಿಲ್ಲ. ಕಡತ ವಿಲೇವಾರಿ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಗಮನ ಹರಿಸಬೇಕು. ಇದು ಒಂದು ರೀತಿಯ ಕ್ಯಾನ್ಸರ್ ಇದ್ದಂತೆ. ಇದಕ್ಕೆ ಕಿಮೋತೆರಪಿ ಮಾಡ್ತಿರೋ ಏನು ಮಾಡ್ತಿರೋ ಗೊತ್ತಿಲ್ಲ. ಅದಕ್ಕೆ ಸರಿಯಾಗಿ ಟ್ರಿಂಟ್ ಮೆಂಟ್ ಕೊಡಿಸಿ ಎಂದು ಮನವಿ ಮಾಡಿದರು.