ಕರ್ನಾಟಕ

karnataka

ETV Bharat / state

ಮನೆ ಮುಂದೆ ಸಿಗರೇಟ್‌ ಸೇದಬೇಡ ಎಂದಿದ್ದಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ! - ಮನೆಮುಂದೆ ಸಿಗರೇಟ್‌ ಸೇದಬೇಡ ಅಂದಿದ್ದಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ

ಸಿಗರೇಟ್​ ಸೇದುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡುವೆ ಮಾರಾಮಾರಿ ನಡೆದು, ದೂರು ಪ್ರತಿದೂರು ದಾಖಲಾಗಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

fight-between-two-families-for-reason-of-smoking
ಮನೆ ಮುಂದೆ ಸಿಗರೇಟ್‌ ಸೇದಬೇಡ ಅಂದಿದ್ದಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ!

By

Published : Apr 2, 2021, 11:47 PM IST

Updated : Apr 3, 2021, 6:59 AM IST

ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಸಂದ್ರದಲ್ಲಿ ಯುವಕನೋರ್ವನಿಗೆ ತಮ್ಮ ಮನೆ ಮುಂದೆ ಕುಳಿತು ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಮಾರಾಮಾರಿ ನಡೆದಿದೆ.

ಭಾಗ್ಯಮ್ಮ ಎಂಬುವವರ ಮನೆ ಮುಂದೆ ಕೂತು ಪ್ರಶಾಂತ್ ಎಂಬಾತ ಸಿಗರೇಟ್ ಸೇದುತ್ತಿದ್ದ. ಆತನಿಗೆ ಮನೆ ಮುಂದೆ ಕುಳಿತು ಸಿಗರೇಟ್ ಸೇದಬೇಡ ಎಂದು ಭಾಗ್ಯಮ್ಮ ಹಾಗೂ ಪುತ್ರ ಆಕಾಶ್ ಹೇಳಿದ್ದಾರೆ. ಈ ವೇಳೆ ಹಿಂದಿನಿಂದ ಅವರ ನಾಯಿಗೆ ಕಲ್ಲಿನಿಂದ ಪ್ರಶಾಂತ್ ಹಾಗೂ ಆತನ ಕಡೆಯವರು ಹೊಡೆದಿದ್ದಾರೆ ಎನ್ನಲಾಗಿದೆ.

ಎರಡು ಕುಟುಂಬಗಳ ನಡುವೆ ಮಾರಾಮಾರಿ

ಹಿಂದಿನಿಂದ ಯಾಕೆ ಕಲ್ಲು ಎಸೆಯುತ್ತಿದ್ದೀರಾ ಎಂದಾಗ ಶುರುವಾದ ಜಗಳ ಎರಡು ಕುಟುಂಬಗಳ ನಡುವೆ ಮಾರಾಮಾರಿಗೆ ತಿರುಗಿದೆ. ಪ್ರಶಾಂತ್ ಹಾಗೂ ಅಕಾಶ್ ಕುಟುಂಬದವರ ನಡುವೆ ನಡುಬೀದಿಯಲ್ಲಿ ಹೊಡೆದಾಟ ನಡೆದಿದೆ.

ಭಾಗ್ಯಮ್ಮನ ಮೇಲೆ ಮಾರಣಾಂತಿಕೆ ಹಲ್ಲೆ ನಡೆದಿದ್ದು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಎರಡೂ ಕುಟುಂಬದವರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ. ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್​ ಹಾಗೂ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ:ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುವುದು ಬಿಜೆಪಿ ಕಾರ್ಯವಿಧಾನ: ರಾಹುಲ್ ವ್ಯಂಗ್ಯ

Last Updated : Apr 3, 2021, 6:59 AM IST

ABOUT THE AUTHOR

...view details