ಕರ್ನಾಟಕ

karnataka

ETV Bharat / state

ಮದ್ಯದ ವಿಚಾರಕ್ಕೆ ಗಲಾಟೆ.. ತಲೆಗೆ ಬಾಟಲಿಯಿಂದ ಹೊಡೆದು ಸ್ನೇಹಿತನನ್ನೇ ಕೊಂದ್ರು - etv bharat kannada

ಮಧ್ಯರಾತ್ರಿ ಎಣ್ಣೆ ಪಾರ್ಟಿ- ಸ್ನೇಹಿತರ ನಡುವೆ ಗಲಾಟೆ- ಓರ್ವನ ಕೊಲೆಯಲ್ಲಿ ಅಂತ್ಯ

fight-between-friends-ends-in-murder-at-bengaluru
ಮದ್ಯದ ವಿಚಾರಕ್ಕೆ ಗಲಾಟೆ.. ತಲೆಗೆ ಬಾಟಲಿಯಿಂದ ಹೊಡೆದು ಸ್ನೇಹಿತನನ್ನೇ ಕೊಂದ್ರು

By

Published : Jul 28, 2022, 12:22 PM IST

ಬೆಂಗಳೂರು:ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಓರ್ವನ ಹತ್ಯೆಯಲ್ಲಿ ಅಂತ್ಯವಾಗಿರುವ ಪ್ರಕರಣ ತಡರಾತ್ರಿ ನಗರದ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನಡೆದಿದೆ. ಪ್ರಶಾಂತ್(30) ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಕೊಲೆಯಾದ ಪ್ರಶಾಂತ್

ಬುಧವಾರ ತಡರಾತ್ರಿ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಪ್ರಶಾಂತ್ ಮತ್ತು ಆತನ ಸ್ನೇಹಿತನ ನಡುವೆ ಮದ್ಯದ ವಿಚಾರಕ್ಕೆ ಜಗಳ ಆರಂಭವಾಗಿದೆ. ಈ ಜಗಳ ತಾರಕಕ್ಕೇರಿದ್ದು, ಸ್ನೇಹಿತರೇ ಪ್ರಶಾಂತ್​ ತಲೆಗೆ ಬಾಟಲಿಯಿಂದ ಹಲ್ಲೆಗೈದಿದ್ದಾರೆ ಎನ್ನಲಾಗ್ತಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:'ನಮ್ಮನ್ನು ಹುಡುಕಬೇಡಿ...' ಪೋಷಕರಿಗೆ ಕರೆ ಮಾಡಿ ವಿದ್ಯಾರ್ಥಿನಿಯರು‌ ನಾಪತ್ತೆ

ABOUT THE AUTHOR

...view details