ಕರ್ನಾಟಕ

karnataka

ETV Bharat / state

ಕಂಡಕ್ಟರ್​ ಜೊತೆ ಫೈಟ್​​​... ಬೆಂಗಳೂರಲ್ಲಿ ಹೊರ ರಾಜ್ಯದವರಿಗೆ ರಕ್ಷಣೆಯೇ ಇಲ್ಲವೆಂದು ಟೆಕ್ಕಿ ಆಕ್ರೋಶ - undefined

ಬಸ್​ ನಿರ್ವಾಹಕ ಮತ್ತು ಪ್ರಯಾಣಿಕನೋರ್ವನ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಟೆಕ್ಕಿ

By

Published : May 21, 2019, 12:05 PM IST

ಬೆಂಗಳೂರು:ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್​ ಹಾಗೂ ಪ್ರಯಾಣಿಕನೋರ್ವನ ನಡುವಿನ ಗಲಾಟೆ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ನಗರದ ಕಾಡುಗೋಡಿ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.

ಇದೇ ಮೇ 14ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟೆಕ್ಕಿ ಪಂಕಜ್ ಎಂಬಾತ ನಗರದ ಟಿನ್ ಫ್ಯಾಕ್ಟರಿಯಿಂದ ಐಟಿಪಿಎಲ್​ಗೆ ಹೋಗಲು ಬಿಎಂಟಿಸಿ ಬಸ್​ ಹತ್ತಿದ್ದ. ನಂತರ ಐಟಿಪಿಎಲ್ ನಿಲ್ದಾಣ ಬರುತ್ತಿದ್ದಂತೆ ಡೋರ್ ಬಳಿ ಪಂಕಜ್ ನಿಂತಿದ್ದ. ಈ ವೇಳೆ ಕಂಡಕ್ಟರ್ ಕೃಷ್ಣಪ್ಪ, ನೀನು ಕೆಳಗೆ ಬಿದ್ದು ಸತ್ತರೆ ನಾನ್ ಉತ್ತರ ಕೊಡಬೇಕು. ಡೋರ್ ಬಿಟ್ಟು ಒಳ ಹೋಗು ಎಂದು ಕಂಡಕ್ಟರ್ ಹೇಳಿದ್ದಾರಂತೆ. ಬಳಿಕ ಈ ಕುರಿತಂತೆ ಟೆಕ್ಕಿ ಪಂಕಜ್ ಹಾಗೂ ಕಂಡಕ್ಟರ್​ ನಡುವೆ ಮಾತಿನ ಚಕಮಕಿ‌ ನಡೆದು, ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.

ಫೇಸ್​ಬುಕ್​ನಲ್ಲಿ ಟೆಕ್ಕಿ ಪೋಸ್ಟ್

ಗಲಾಟೆ ತಣ್ಣಗಾಗದ್ದನ್ನು ಮನಗಂಡ ಡ್ರೈವರ್​ ಬಸ್ಸನ್ನು ಕಾಡುಗೋಡಿ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದಾನೆ. ಆಗ ಕರ್ತವ್ಯನಿರತ ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದಡಿ ಟೆಕ್ಕಿ ವಿರುದ್ಧ ಕಂಡಕ್ಟರ್ ಕೃಷ್ಣಪ್ಪ ದೂರು ನೀಡಿದ್ದಾರೆ. ಅಲ್ಲದೆ ಕಂಡಕ್ಟರ್ ಕೇಸ್​​ಗೆ ಪ್ರತಿಯಾಗಿ ಟೆಕ್ಕಿ ಕೂಡ ದೂರು ದಾಖಲಿಸಿದ್ದಾನೆ.

ಫೇಸ್​ಬುಕ್​ನಲ್ಲಿ ಟೆಕ್ಕಿ ಪೋಸ್ಟ್

ಫೇಸ್​ಬುಕ್​ನಲ್ಲಿ ಟೆಕ್ಕಿ ಪೋಸ್ಟ್​:

ಇನ್ನು ಘಟನೆ ಬಳಿಕ ಟೆಕ್ಕಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾನೆ. ಬೆಂಗಳೂರಲ್ಲಿ ಹೊರ ರಾಜ್ಯದವರಿಗೆ ರಕ್ಷಣೆಯೇ ಇಲ್ಲ. ಹೊರ ರಾಜ್ಯದವರನ್ನು ನೋಡುವ ರೀತಿಯೇ ಬೇರೆಯಾಗಿದೆ. ಪೊಲೀಸರಿಂದ ನ್ಯಾಯವೇ‌ ಸಿಕ್ಕಿಲ್ಲ ಎಂದು ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ್ದಾನೆ.

For All Latest Updates

TAGGED:

ABOUT THE AUTHOR

...view details