ಬಂಜೆತನಕ್ಕೆ ಚಿಕಿತ್ಸೆ ನೀಡುವ ಕೆಲಸದ ಜೊತೆಗೆ ಕಾಮಿನಿ ರಾವ್ ಫೌಂಡೇಷನ್, ಇದೀಗ ಶಿಕ್ಷಣ ಕ್ಷೇತ್ರದ ಬಗೆಗೂ ಕಾಳಜಿ ವಹಿಸಿದೆ. ಈ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದು, ಡಾ.ಕಾಮಿನಿ ರಾವ್ ಕೇರ್ಸ್ ಎಕ್ಸಲೆನ್ಸ್ ಅವಾರ್ಡ್ಸ್ ಮೂಲಕ ಪ್ರಶಸ್ತಿ ಘೋಷಿಸಲಾಗಿದೆ.
ಕಾಮಿನಿ ಕೇರ್ಸ್ ಎಕ್ಸಲೆನ್ಸ್ ಅವಾರ್ಡ್ಸ್ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ - Kamini Cares Excellence Awards
ಪದ್ಮಶ್ರೀ ಪುರಸ್ಕೃತೆ ಡಾ.ಕಾಮಿನಿ ರಾವ್ ಅವರು, ಕಾಮಿನಿ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದಾರೆ.
ಕಾಮಿನಿ ರಾವ್ ಪತಿ ಅರವಿಂದ್ ರಾವ್ ಮಾತನಾಡಿ, ಸೀಮಿತ ವಿಷಯಕ್ಕೆ ಶಿಷ್ಯವೇತನ ನೀಡುತ್ತಿಲ್ಲ. ಎಲ್ಲದಕ್ಕೂ ಇದು ಸಲ್ಲಲಿದೆ. ಯಾರಿಗೆ ಇದನ್ನು ನೀಡಬೇಕು. ಶಿಷ್ಯವೇತನಕ್ಕೆ ಅರ್ಹರು ಯಾರು ಎಂಬುದನ್ನು ಬಂದ ಅರ್ಜಿಗಳನ್ನು ಪರಿಶೀಲಿಸಿ, ನಿರ್ಧರಿಸಲು ಪ್ರತ್ಯೇಕ ಜೂರಿ ಸದಸ್ಯರು ಇರಲಿದ್ದಾರೆ. ನಮ್ಮ ರಾಜ್ಯ ಅಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಅರ್ಜಿಯನ್ನು ಸ್ವೀಕರಿಸಲಿದ್ದೇವೆ. ಆನ್ಲೈನ್ ಅಪ್ಲಿಕೇಷನ್ ಪ್ರಕ್ರಿಯೆ ಜುಲೈ 10ರಿಂದ ಶುರುವಾಗಲಿದ್ದು, ಆಗಸ್ಟ್ 15ಕ್ಕೆ ಮುಕ್ತಾಯವಾಗಲಿದೆ. ಅಪ್ಲಿಕೇಷನ್ಗಳಲ್ಲಿ ಸರಿ ತಪ್ಪನ್ನು ತುಲನೆ ಮಾಡಿ ಸೆಪ್ಟೆಂಬರ್ನಲ್ಲಿ ಅವಾರ್ಡ್ ನೀಡಲಿದ್ದೇವೆ ಎಂದರು.
ಇದನ್ನೂ ಓದಿ:KRS ರಕ್ಷಣೆಗೆ ಅವ್ರನ್ನೇ ಮಲಗಿಸಬೇಕೆಂದ ಹೆಚ್ಡಿಕೆ..ಭಾಷೆ ಮೇಲೆ ಹಿಡಿತ ಇಲ್ವಾ ಎಂದು ಕುಟುಕಿದ ಸಂಸದೆ ಸುಮಲತಾ