ಬೆಂಗಳೂರು : ವಾರ್ಡ್ ಸಂಖ್ಯೆ 179 ಶಾಕಾಂಬರಿ ನಗರದಲ್ಲಿ ಕೆಲಸ ನಿರ್ವಹಿಸುವ ಸುಮಾರು 150 ಪೌರ ಕಾರ್ಮಿಕರಿಗೆ ಪಾಲಿಕೆ ಸದಸ್ಯೆ ಮಾಲತಿ ಸೋಮಶೇಖರ್ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದರು.
ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದ ಬಿಬಿಎಂಪಿ ಕಾರ್ಪೋರೇಟರ್ - ಶಾಕಂಬರಿ ನಗರದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ
ವಾರ್ಡ್ ವ್ಯಾಪ್ತಿಯ ಜಯನಗರ ಪ್ರದೇಶವನ್ನು ಸ್ವಚ್ಚಗೊಳಿಸಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಶಾಕಾಂಬರಿ ನಗರ ಪಾಲಿಕೆ ಸದ್ಯಸ್ಯೆ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ,ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ವಾರ್ಡ್ ಸಂಖ್ಯೆ 179 ರೆಡ್ ಝೋನ್ ಆಗಿದ್ದಾಗಲೂ ಪೌರ ಕಾರ್ಮಿಕರು ಪ್ರತಿನಿತ್ಯ ಸ್ವಚ್ಚತಾ ಕಾರ್ಯದಲ್ಲಿ ತೊಡಗುತ್ತಿದ್ದರು. ವಾರ್ಡ್ ವ್ಯಾಪ್ತಿಯ ಜಯನಗರ ಪ್ರದೇಶವನ್ನು ಸ್ವಚ್ಚಗೊಳಿಸಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಶಾಕಾಂಬರಿ ನಗರ ಪಾಲಿಕೆ ಸದ್ಯಸ್ಯೆ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ,ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಕೆಲ ಹಿರಿಯ ಪೌರಕಾರ್ಮಿಕರು ಭಾವುಕರಾದರು.
ಇದೇ ವೇಳೆ ಪೌರ ಕಾರ್ಮಿಕರಿಗೆ ಆರ್ವಿ ಕಾಲೇಜು ಆಡಳಿತ ಮಂಡಳಿ ತಲಾ 5 ಸಾವಿರ ರೂ. ನೀಡಿ ಗೌರವಿಸಿತು. ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ಗಳಾದ ಎನ್ಆರ್ ರಮೇಶ್, ಸೋಮಶೇಖರ್, ಹಾಗೂ ಅರ್ವಿ ಕಾಲೇಜು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.