ಬೆಂಗಳೂರು :ಕೊರೊನಾದ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ತೆರಿಗೆ ಏರಿಸಿ ಡೀಸೆಲ್ ದರವನ್ನೂ ಹೆಚ್ಚಿಸಿದೆ. ಕೂಡಲೇ ಕೇಂದ್ರ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ಡೀಸೆಲ್ ದರವನ್ನು ಇಳಿಸಬೇಕೆಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ ಚನ್ನಾರೆಡ್ಡಿ ಆಗ್ರಹಿಸಿದ್ದಾರೆ.
ಡೀಸೆಲ್ ಬೆಲೆ ಇಳಿಕೆಗೆ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಆಗ್ರಹ - Federation of lorry owners association president
ಕೊರೊನಾ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಸರ್ಕಾರ ಡೀಸೆಲ್ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡುತ್ತಿದೆ. ಕೂಡಲೇ ಈ ದರವನ್ನು ಇಳಿಸಬೇಕೆಂದು ಫೇಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಚನ್ನಾರೆಡ್ಡಿ ಆಗ್ರಹಿಸಿದ್ದಾರೆ..
ಕೊರೊನಾದಿಂದ ದೇಶದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಏರುಪೇರಾಗಿವೆ. ಇದರಿಂದ ನಮ್ಮ ಸರಕು ಸಾಗಾಣಿಕೆ ವಾಹನಗಳ ವ್ಯವಹಾರವು ಕುಸಿದಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದಿನೇದಿನೆ ಡೀಸೆಲ್ ದರ ಹೆಚ್ಚಿಸುತ್ತಿರುವುದು ನಮಗೆ ದೊಡ್ಡ ಹೊಡೆತವಾಗಿದೆ ಎಂದರು.
ಈ ಹಿಂದಿನ ಸರ್ಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ಇದ್ದಾಗ 50 ರಿಂದ 60 ರೂ.ಗೆ ಡೀಸೆಲ್ ಮಾರಾಟ ಮಾಡುತ್ತಿದ್ದರು. ಆದರೆ, ಈಗ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 60 ಡಾಲರ್ ಇದ್ದರೂ ಅವೈಜ್ಞಾನಿಕವಾಗಿ ಡೀಸೆಲ್ ಬೆಲೆ ಏರಿಸಲಾಗಿದೆ. ಅಮೆರಿಕಾ19%, ಫ್ರಾನ್ಸ್ 63%, ಜಪಾನ್47%, ಬ್ರಿಟನ್‌ನಲ್ಲಿ 62% ಡೀಸೆಲ್ ಮೇಲೆ ತೆರಿಗೆ ವಿಧಿಸಿದ್ರೆ, ಭಾರತದಲ್ಲಿ 250% ತೆರಿಗೆ ವಿಧಿಸಲಾಗುತ್ತಿದೆ. ಸರ್ಕಾರ ಒಂದು ತಿಂಗಳ ಒಳಗೆ ಡೀಸೆಲ್ ಬೆಲೆಯನ್ನು ಕಡಿಮೆ ಮಾಡದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಚನ್ನಾರೆಡ್ಡಿ ಎಚ್ಚರಿಕೆ ನೀಡಿದರು.
ಅಲ್ಲದೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಡಿ ಟ್ಯಾರಿಪ್ ಮಾಡುವುದು. 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವುದರ ಬಗ್ಗೆ ಚರ್ಚಿಸಿ ಡೀಸೆಲ್ ದರವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಚನ್ನಾರೆಡ್ಡಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.