ಬೆಂಗಳೂರು : ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗವಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಗೈರು ಹಾಜರಾದ ರಾಜ್ಯದ 44 ಪೊಲೀಸ್ ಇನ್ಸ್ಪೆಕ್ಟರ್ಗಳು ಕರ್ತವ್ಯ ಲೋಪವೆಸಗಿದ್ದು, ಇದೀಗ ಅಂತಹವರನ್ನ ಅಮಾನತು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ನಿಗದಿತ ಅವಧಿ ಬಳಿಕ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ಅಥವಾ ಬೇರೆ ಘಟಕಕ್ಕೆ ವರ್ಗಾಯಿಸುವುದು ನಡೆದುಕೊಂಡು ಬಂದಿರುವ ಸಾಮಾನ್ಯ ಪ್ರಕ್ರಿಯೆ. ಸೂಚಿಸಿದ ಘಟಕದಲ್ಲಿ ವರ್ಗಾವಣೆಗೊಂಡ ಪೊಲೀಸರು ವರದಿ ಮಾಡಿ ಪಾಲನಾ ವರದಿಯನ್ನ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಬೇಕು. ಆದರೆ, ಕೆಲ ಪೊಲೀಸ್ ಇನ್ಸ್ಪೆಕ್ಟರ್ಗಳು ವರ್ಗಾವಣೆಯಾಗಿ ಹಲವು ತಿಂಗಳಾದರೂ ವರ್ಗವಾದ ಸ್ಥಳಕ್ಕೆ ವರದಿ ಮಾಡಿಕೊಳ್ಳದೇ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಉಲ್ಲಂಘಿಸಿರುವುದು ಕಂಡು ಬಂದ ಹಿನ್ನೆಲೆ ಅಂತಹವರಿಗೆ ನೊಟೀಸ್ ನೀಡಿ ಏಳು ದಿನದೊಳಗೆ ಉತ್ತರಿಸದಿದ್ದರೆ ಅಮಾನತು ಮಾಡಿ, ಇಲಾಖಾ ವಿಚಾರಣೆಗೊಳಪಡಿಸುವ ಎಚ್ಚರಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.
ಡ್ಯೂಟಿ ವರದಿ ಮಾಡಿಕೊಳ್ಳದಿದ್ದರೆ ಸಸ್ಪೆಂಡ್ ಖಚಿತ : ವರ್ಗಾವಣೆಯಾಗಿ ಹಲವು ತಿಂಗಳು ಕಳೆದರೂ ಇಲಾಖೆ ಸೂಚಿಸಿದ ಘಟಕಕ್ಕೆ ವರದಿ ಮಾಡಿಕೊಳ್ಳದ 44 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಸಸ್ಪೆಂಡ್ ಎಂಬ ತೂಗುಗತ್ತಿ ನೇತಾಡುತ್ತಿದೆ. ಕರ್ತವ್ಯ ಲೋಪವೆಸಗಿದ ಎಲ್ಲ ಇನ್ಸ್ಪೆಕ್ಟರ್ಗಳಿಗೆ ಏಳು ದಿನದೊಳಗಾಗಿ ಉತ್ತರಿಸುವಂತೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ.
ಡಿಸೆಂಬರ್ 7ರಂದು ನೊಟೀಸ್ ಹೊರಡಿಸಿದ್ದು, ಇಂದು ಸಂಜೆಯೊಳಗೆ ಉತ್ತರಿಸದಿದ್ದರೆ ಅಂತಹವರನ್ನ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) 1965/89ರ ನಿಯಮ 5 ಪ್ರಕಾರ, ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೊಳಪಡಿಸುವುದಾಗಿ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವರ್ಗಾವಣೆಯಾದರೂ ವರದಿ ಮಾಡಿಕೊಂಡಿಲ್ಲ ಯಾಕೆ ?: ನಿಗದಿತ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯಾದರೂ ವರದಿ ಮಾಡಿಕೊಳ್ಳದ ಹಿಂದೆ ಹಲವು ಕಾರಣಗಳನ್ನ ಕಾಣಬಹುದಾಗಿದೆ. ನಿರ್ದಿಷ್ಟ ಘಟಕ ಅಥವಾ ಠಾಣೆಯಲ್ಲಿ ಕರ್ತವ್ಯ ಮಾಡುವ ಆಶಯ ಹೊಂದಿರುತ್ತಾರೆ. ಅಥವಾ ತಮ್ಮಿಷ್ಟದ ಜಾಗಕ್ಕೆ ಪೋಸ್ಟಿಂಗ್ ದೊರೆಯದಿರುವುದು ಇದಕ್ಕೆ ಕಾರಣವಾಗಿರಬಹುದು.
ಇನ್ಸ್ಪೆಕ್ಟರ್ ಅಮಾನತಲ್ಲ ವಜಾ ಮಾಡುತ್ತೇವೆ :44 ಇನ್ಸ್ಪೆಕ್ಟರ್ ಅಮಾನತು ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸುತ್ತಾ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಯಾರೇ ಶಿಫಾರಸು ಮಾಡಿದರೂ ಸಾರ್ವಜನಿಕರ ಹಿತಾಸಕ್ತಿಯಿಂದ ವರ್ಗಾವಣೆ ಮಾಡುತ್ತೇವೆ. ಅವರು ವರ್ಗಾವಣೆಗೊಂಡ ಸ್ಥಳಕ್ಕೆ ಹೋಗಿ ವರದಿ ಮಾಡದೇ ಇದ್ದರೆ ಅಶಿಸ್ತು ಪ್ರದರ್ಶಿಸಿದರೆ ಏನು ಮಾಡಬೇಕು?. ಅಮಾನತು ಮಾಡದೇ ಏನು ಮಾಡಬೇಕು? ಎಂದು ಪ್ರಶ್ನಿಸಿದರು. ಈಗಾಗಲೇ ನೋಟಿಸ್ ಕೊಟ್ಟಿದ್ದೇವೆ. ಅಮಾನತು ಮಾಡುತ್ತೇವೆ. ತಪ್ಪು ಎಸಗಿದ್ದರೆ ವಜಾ ಕೂಡ ಮಾಡುತ್ತೇವೆ. ಕಷ್ಟಗಳಿದ್ದರೆ ಹಿರಿಯ ಅಧಿಕಾರಿಗಳಿಗೆ ಹೇಳಬೇಕು. ಒತ್ತಾಯಕ್ಕೆ ಯಾರನ್ನೂ ವರ್ಗಾವಣೆ ಮಾಡಲ್ಲ. ನಿಯಮದ ಪ್ರಕಾರ ವರ್ಗಾವಣೆ ಮಾಡಲಾಗುತ್ತೆ ಎಂದರು.
44 ಮಂದಿ ಇನ್ಸ್ಪೆಕ್ಟರ್ಗಳು ಹಾಗೂ ಅವರ ವರ್ಗಾವಣೆ ಆದೇಶದ ಮಾಹಿತಿ:
1. ಹರೀಶ್ ಬಿ ಸಿ, ಸಿ.ಐ.ಡಿ ಘಟಕಕ್ಕೆ ವರ್ಗಾವಣೆ ಆದೇಶದಲ್ಲಿರುವವರು.
2. ಆರುಣ್ ಎಸ್ ಮುರುಗುಂಡಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
3. ಈಶ್ವರಿ ಪಿ ಎಸ್ , ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
4. ಕುಮಾರ್ ಎಪಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
5. ರವಿಕುಮಾರ್ ಆರ್ ಜಿ, ರಾಜ್ಯ ಗುಪ್ತವಾರ್ತೆ ಘಟಕಕ್ಕೆ ವರ್ಗಾವಣೆ
6. ಸತೀಶ್ ಎಸ್ ಹೆಚ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
7. ಎಸ್ ಎಸ್ ತೇಲಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
8. ಸಿದ್ದೇಶ್ ಎಂ ಡಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
9. ವಿಜಯ ಮುರುಗುಂಡಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
10. ಯರಿಸ್ವಾಮಿ ಇ, ವಿವಿಐಪಿ ಭದ್ರತೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ
11. ಗುರುಪ್ರಸಾದ್ ಎ. ಐಎಸ್ ಡಿ ಘಟಕಕ್ಕೆ ವರ್ಗಾವಣೆ
12. ಉದಯರವಿ ಜಿ, ಶಂಕರಪುರಂ ಪೊಲೀಸ್ ಠಾಣೆ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ
13. ಮಂಜೇಗೌಡ ಎ.ಜಿ, ಟಿಟಿಐ, ಬೆಂಗಳೂರು ನಗರ ಇಲ್ಲಿಗೆ ವರ್ಗಾವಣೆ
14. ಷಣ್ಮುಖಪ್ಪ ಜಿ ಆರ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
15. ರಾಘವೇಂದ್ರ ಬಾಬು, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
16. ಸತೀಶ್ ಎಂ ಆರ್. ಕಾವೂರು ಪೊ.ರಾ., ಮಂಗಳೂರು ನಗರ ಇಲ್ಲಿಗೆ ವರ್ಗಾವಣೆ
17. ಲಕ್ಷ್ಮಯ್ಯ ಎಂ ಬಿ, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
18. ಕಾಳಪ್ಪ ಬಡಿಗೇರ್, ಕರ್ನಾಟಕ ಲೋಕಾಯುಕ್ತ ಘಟಕಕ್ಕೆ ವರ್ಗಾವಣೆ
19. ಬಸಲಿಂಗಯ್ಯ ಸುಬ್ರಾಪುರ್‌ಮರ್, ಪಿಐ, ಸಿಐಡಿ ಘಟಕಕ್ಕೆ ವರ್ಗಾವಣೆ