ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲ ಭೀತಿ: ಕಂಪ್ಲಿ ಗಣೇಶ್ ಅಮಾನತು ದಿಢೀರ್​ ವಾಪಸ್​ ಪಡೆದ ಕಾಂಗ್ರೆಸ್..! - undefined

ಆಪರೇಷನ್ ಕಮಲ ಭೀತಿ ಕಾಂಗ್ರೆಸ್​​ ಶಾಸಕ ಗಣೇಶ್​ಗೆ ವರವಾಗಿದೆ. ಆನಂದ ಸಿಂಗ್​ ಮೇಲೆ ಹಲ್ಲೆ ನಡೆಸಿ ಕಾಂಗ್ರೆಸ್​​ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು ಕಂಪ್ಲಿ ಶಾಸಕ. ಇದೀಗ ಶಾಸಕ ಗಣೇಶ್ ಅಮಾನತು ಆದೇಶವನ್ನು ಕಾಂಗ್ರೆಸ್ ಪಕ್ಷ ದಿಢೀರ್​ ವಾಪಸ್​ ಪಡೆದಿದೆ.

ಕಂಪ್ಲಿ ಶಾಸಕ ಗಣೇಶ್

By

Published : May 29, 2019, 10:01 PM IST

Updated : May 29, 2019, 10:58 PM IST

ಬೆಂಗಳೂರು:ರೆಸಾರ್ಟ್​ನಲ್ಲಿ ವಿಜಯನಗರ ಶಾಸಕ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕನಿಗೆ ಮತ್ತೊಂದು ರಿಲೀಫ್​ ಸಿಕ್ಕಿದೆ. ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಹಠಾತ್ತನೇ ಹಿಂಪಡೆದಿದೆ.

ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಮುನ್ನ ಅಮಾನತು ಆದೇಶ ಹಿಂಪಡೆದಿರುವ ಸಂದೇಶವನ್ನು ಕಾಂಗ್ರೆಸ್ ಪಕ್ಷ ಶಾಸಕ ಗಣೇಶ್​ಗೆ ರವಾನಿಸಿದೆ ಎಂದು ತಿಳಿದುಬಂದಿದೆ.

ಆಪರೇಷನ್ ಕಮಲದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕರು ತಮ್ಮ ಶಾಸಕರನ್ನ ಮತ್ತು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗ್ತಿದೆ. ಸ್ವಪಕ್ಷದ ಶಾಸಕನ ಮೇಲೆಯೇ ಹಲ್ಲೆ ನಡೆಸಿ ಕಾರಾಗೃಹ ಶಿಕ್ಷೆ ಅನುಭವಿಸಿ ಬಂದಿರುವ ಶಾಸಕ ಗಣೇಶ್​ ವಿರುದ್ಧದ ಅಮಾನತು ಆದೇಶವನ್ನ ಕಾಂಗ್ರೆಸ್​ ಹಿಂಪಡೆದಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಪರಸ್ಪರ ಚರ್ಚಿಸಿ ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ವಾಪಸ್​ ಪಡೆಯಲಾಗಿದೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು ಮತ್ತು ಶಾಸಕ ಗಣೇಶ್ ಅಮಾನತು ಮಾಡಿದ್ದಕ್ಕೆ ಸಿಟ್ಟಾಗಿ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಸೇರಿಬಿಡುತ್ತಾರೆನ್ನುವ ಆತಂಕದಿಂದ ಗಣೇಶ್ ಮನವೊಲಿಕೆಗೆ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗ್ತಿದೆ.

ಕಳೆದ ಫೆಬ್ರವರಿ ಬಿಡದಿಯ ರೆಸಾರ್ಟ್​ನಲ್ಲಿ ಆಪರೇಷನ್ ಕಮಲದಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ತಂಗಿದ್ದ ಸಂದರ್ಭ ಶಾಸಕ ಗಣೇಶ್ ಅವರು ಶಾಸಕ ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.​ ಬಳಿಕ ಬಂಧನಕ್ಕೊಳಗಾಗಿದ್ದ ಗಣೇಶ್​, ಇತ್ತೀಚೆಗಷ್ಟೇ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು.

Last Updated : May 29, 2019, 10:58 PM IST

For All Latest Updates

TAGGED:

ABOUT THE AUTHOR

...view details