ಕರ್ನಾಟಕ

karnataka

ETV Bharat / state

ಸಿಲಿಕಾನ್​​​​ ಸಿಟಿ ಜನರಿಗೆ ಹಂದಿ ಜ್ವರದ ಭೀತಿ!? - undefined

ಉದ್ಯಾನನಗರಿ ಜನರಿಗೆ ಮತ್ತೆ ಹಂದಿ ಜ್ವರದ ಭೀತಿ ಎದುರಾಗಿದೆ. ಹೆಚ್​1ಎನ್​1 ತಡೆಗೆ ಏನೆಲ್ಲ ಕ್ರಮ ಅಗತ್ಯ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಹೀಗೆ ಹೇಳುತ್ತಾರೆ.

ಹಂದಿಜ್ವರ

By

Published : Mar 30, 2019, 5:20 PM IST

ಬೆಂಗಳೂರು: ಪ್ರತಿ ವರ್ಷ ಜನರಲ್ಲಿ ಆತಂಕ ಹುಟ್ಟಿಸುತ್ತಿದ್ದ ಮಹಾಮಾರಿ ಹೆಚ್​1ಎನ್1 ಮತ್ತೆ ಜನರಲ್ಲಿ ನಡುಕ ಹುಟ್ಟಿಸಿದೆ. ಯಾಕೆಂದರೆ ಈ ವರ್ಷ ರಾಜ್ಯಾದ್ಯಂತ 4,415 ಜನರಲ್ಲಿ ಹೆಚ್1ಎನ್1 ಜ್ವರ ಶಂಕಿತ ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ 1,141 ಜ್ವರ ಕಾಣಿಸಿಕೊಂಡಿದ್ದು, ಇದುವರೆಗೂ 14 ಜನ ಸಾವನ್ನಪ್ಪಿದ್ದಾರೆ.

ನಗರದಲ್ಲಿ ಅತಿ ಹೆಚ್ಚು ಉಷ್ಣಾಂಶದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಈ ಹಂದಿ ಜ್ವರದ ಸೋಂಕು ಹೆಚ್ಚಾಗಿದೆ. ಇನ್ನು ದಿನನಿತ್ಯ ಬಿಬಿಎಂಪಿ ವ್ಯಾಪ್ತಿಯಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿಯಲ್ಲಿ ಇದುವರೆಗೂ 211, ಉಡುಪಿ 155, ದಕ್ಷಿಣ ಕನ್ನಡ 99 ಮತ್ತು ಶಿವಮೊಗ್ಗ 99, ಮೈಸೂರಿನಲ್ಲಿ 93 ಪ್ರಕರಣಗಳು ಪತ್ತೆಯಾಗಿವೆ.

ಆರೋಗ್ಯ ಇಲಾಖೆಯಿಂದ ರಾಜ್ಯಾದ್ಯಂತ ಈ ಹಂದಿ ಜ್ವರ ತಡೆಯಲು ಕಾರ್ಯಕ್ರಮ ರೂಪಿಸಲಾಗಿದೆ. ಆಶಾ ಕಾರ್ಯಕರ್ತೆಯರ ಸಹಾಯದೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ರೋಗಕ್ಕೆ ಸಂಬಂಧಿಸಿದ ಟ್ಯಾಮಿಪ್ಲೂ ಮಾತ್ರೆಗಳನ್ನು ಎಲ್ಲ ಆಸ್ಪತ್ರೆಗಳಿಗೂ ಕಳುಹಿಸಲಾಗಿದೆ. ‌ಎಲ್ಲೂ ಔಷಧಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಶರೀಫ್ ತಿಳಿಸಿದರು.

ಆರೋಗ್ಯ ಇಲಾಖೆಯ ಅಧಿಕಾರಿ ಶರೀಫ್

ಹಂದಿ ಜ್ವರದ ಲಕ್ಷಣಗಳು :

  • ಅತಿಯಾದ ತಲೆನೋವು
  • ಬಿಡದೆ ಇರುವ ಜ್ವರ
  • 1 ವಾರಕ್ಕೂ ಹೆಚ್ಚು ಕಾಲ ಉಳಿಯುವ ಕೆಮ್ಮು
  • ಗಟ್ಟಿಯಾದ ಕಫ ಬರುವಿಕೆ
  • ಮೈ ಬೆವರುವುದು

ಇವೆಲ್ಲಾ ಈ ರೋಗದ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡು ಬಂದ ಕೂಡಲೇ ತಡ ಮಾಡದೇ ವೈದ್ಯರನ್ನ ಭೇಟಿಯಾಗಿ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ. ಶರೀಷ್ ಸೂಚನೆ ನೀಡಿದರು.

For All Latest Updates

TAGGED:

ABOUT THE AUTHOR

...view details