ಬೆಂಗಳೂರು:ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವೆಂಕಟೇಶ್ ಬಂಧಿತ ಆರೋಪಿ. ಈತ ಪ್ರಕರಣದ ಪ್ರಮುಖ ಆರೋಪಿಯಾದ ರಾಚಪ್ಪನ ಸಹೋದರನಾಗಿದ್ದಾನೆ. ವೆಂಕಟೇಶ್ ಸಹ ಎಫ್ಡಿಎ ಪರೀಕ್ಷಾ ಆಭ್ಯರ್ಥಿಯಾಗಿದ್ದು, ಈತನಿಗೆ ಸಹೋದರನಿಂದ ಪ್ರಶ್ನೆಪತ್ರಿಕೆ ದೊರೆಯುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಪ್ಲಾನ್ ಮಾಡಿ ಒಬ್ಬೋಬ್ಬರಿಗೆ 10 ಲಕ್ಷ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡುವ ಯೋಜನೆ ರೂಪಿಸಿಕೊಂಡಿದ್ದರು ಎನ್ನಲಾಗುತ್ತಿದೆ.