ಬೆಂಗಳೂರು:ಹೈವೊಲ್ಟೇಜ್ ವೈಯರ್ ತಗುಲಿ ತಂದೆ-ಮಗ ಗಾಯಗೊಂಡಿರುವ ಘಟನೆ ಜೆ.ಪಿ. ನಗರದ 7ನೇ ಹಂತದಲ್ಲಿ ನಡೆದಿದೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಫೆ.19ರಂದು ಜೆ.ಪಿ.ನಗರ 7ನೇ ಹಂತದಲ್ಲಿರುವ ಆರ್ಬಿಐ ಲೇಔಟ್ನ ಇಂಡಿಯನ್ ಗ್ಯಾಸ್ ಸರ್ವಿಸ್ ಸೆಂಟರ್ಗೆ ಧನಂಜಯ್ ಮತ್ತು ಅವರ ನಾಲ್ಕು ವರ್ಷದ ಮಗ ತನ್ಮಯ್ ಬಂದಿದ್ದರು.
ತನ್ಮಯ್ ಅಲ್ಲೇ ಆಟವಾಡುತ್ತಾ ಅಲ್ಲಿದ್ದ ಒಂದು ಕೇಬಲ್ ವೈಯರ್ನನ್ನು ಮುಟ್ಟಲು ಹೋಗಿದ್ದ. ಇದನ್ನು ಕಂಡ ತಂದೆ ಧನಂಜಯ್ ವೈಯರ್ನನ್ನು ಮೇಲಕ್ಕಿತ್ತಿಡಲು ಹೋಗಿದ್ದಾರೆ.