ಬೆಂಗಳೂರು:ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನನ್ನು ಸ್ವತಃ ತಂದೆಯೇ ಕೊಲೆ ಮಾಡಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬಿಗೆರೆ ನಿವಾಸಿ ಹುಸೇನ್ (68) ಬಂಧಿತ (ತಂದೆ) ಆರೋಪಿ. ಬಾಬರ್ (30) ಕೊಲೆಯಾದ (ಮಗ) ವ್ಯಕ್ತಿ. ಅಬ್ಬಿಗೆರೆಯಲ್ಲಿ ವಾಸ ಮಾಡುತ್ತಿದ್ದ ಹುಸೇನ್ಗೆ ಒಬ್ಬನೇ ಮಗನಿದ್ದು, ಪತ್ನಿ ಗೃಹಿಣಿಯಾಗಿದ್ದಾರೆ. ಜೀವನಕ್ಕಾಗಿ ಹುಸೇನ್ ಸೆಕ್ಯೂರಿಟಿ ಕೆಲಸ ಮಾಡಿದರೆ, ಮಗ ಬಾಬರ್ ಗಾರೆ ಕೆಲಸ ಮಾಡುತ್ತಿದ್ದ. ಇದರ ನಡುವೆ ಕುಡಿತದ ಚಟ ಅಂಟಿಸಿಕೊಂಡಿದ್ದ ಮಗ ನಿತ್ಯವೂ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.