ಬೆಂಗಳೂರು:ಹಳೆ ದ್ವೇಷದ ಹಿನ್ನೆಲೆ ಹಾಡಹಗಲೇ ವ್ಯಕ್ತಿಯೊಬ್ಬನನ್ನ ಕೊಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಂತ್ರಿಮಾಲ್ ಬಳಿಯ ನಟರಾಜ ಥಿಯೇಟರ್ ಹತ್ತಿರ ಮಂಗಳವಾರ ಬೆಳಗ್ಗೆ 8-30ಕ್ಕೆ ಆಟೋದಲ್ಲಿ ಬಂದಿದ್ದ ನಾಲ್ವರು ಮಾಸ್ಕ್ ಧಾರಿಗಳು ದಾಳಿ ಮಾಡಿದ್ದಾರೆ. ಹೋಂಡಾ ಆ್ಯಕ್ಟೀವಾದಲ್ಲಿ ಬರುತ್ತಿದ್ದ ಗಣೇಶ್ ಎಂಬುವವರನ್ನು ಅಡ್ಡಗಟ್ಟಿ ಮಚ್ಚು ಲಾಂಗ್ನಿಂದ ಹಲ್ಲೆ ನಡೆಸಿದ್ದಾರೆ.
ನೇರವಾಗಿ ತಲೆಯನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ. ಸತ್ತಿದ್ದಾರೆ ಎಂದು ಭಾವಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಬಿದ್ದಿದ್ದವನನ್ನ ಕಂಡು ಸ್ಥಳೀಯರು ಪೊಲೀಸರಿಗೆ ಹಾಗೂ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ನಂತರ ಗಣೇಶನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಸಾರಿ ಕೋವಿಡ್ ಸಂದರ್ಭದಲ್ಲಿ ಕುಟುಂಬದಲ್ಲೇ ಮನಸ್ತಾಪ ಇದ್ದ ಹಿನ್ನೆಲೆ ಜಗಳ ನಡೆದು ಗಣೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. 2020 ರಲ್ಲಿ ಕಿನೋ ಥಿಯೇಟರ್ ಬಳಿ ಯುವಕನೊಬ್ಬನನ್ನ ಕೊಂದಿರುವ ಆರೋಪ ಇವರ ಮೇಲಿದೆ.