ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರಿಗಾಗಿ ಉಪವಾಸ ಅಭಿಯಾನಕ್ಕೆ ಮುಂದಾದ ರಂಗಕರ್ಮಿ ಪ್ರಸನ್ನ - ವಲಸೆ ಕಾರ್ಮಿಕರಿಗಾಗಿ ಉಪವಾಸ ಅಭಿಯಾನಕ್ಕೆ ಮುಂದಾದ ರಂಗಕರ್ಮಿ ಪ್ರಸನ್ನ

ಲಾಕ್ ಡೌನ್ ವೇಳೆ ಅನ್ನ-ಆಹಾರವಿಲ್ಲದೆ ವಾರಗಟ್ಟಲೆ ನಡೆದು ತಮ್ಮ ತಮ್ಮ ಊರುಗಳತ್ತ ಪಯಣಿಸಿದ ಕಾರ್ಮಿಕರಿಗಾಗಿ ಎಲ್ಲರೂ ಒಂದು ದಿನ ಉಪವಾಸ ಕೈಗೊಳ್ಳಬೇಕು ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೊಡು ಕರೆ ಕೊಟ್ಟಿದ್ದಾರೆ

fasting campaign for migrant workers by Artist Prasanna
ಉಪವಾಸ ಕೈಗೊಳ್ಳಲು ಪ್ರಸನ್ನ ಕರೆ

By

Published : Apr 9, 2020, 7:25 AM IST

ಬೆಂಗಳೂರು:ಲಾಕ್ ಡೌನ್ ವಿಧಿಸಿದ ಹಿನ್ನೆಲೆ ಹಸಿದ ಹೊಟ್ಟೆಯಲ್ಲೇ ನೂರಾರು ಕಿಲೋಮೀಟರ್ ನೆಡೆದ ವಲಸೆ ಕಾರ್ಮಿಕರಿಗಾಗಿ ಒಂದು ದಿನ ಉಪವಾಸ ಮಾಡಬೇಕೆಂದು ರಂಗಕರ್ಮಿ ಪ್ರಸನ್ನ ಹೆಗ್ಗೊಡು ಕರೆ ಕೊಟ್ಟಿದ್ದಾರೆ.

ದೆಹಲಿಯ ಆನಂದ ವಿಹಾರಿಯಿಂದ ಬಿಹಾರ , ಉತ್ತರಪ್ರದೇಶ , ಒಡಿಶಾ, ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರು ವಾಪಸ್ ತಮ್ಮ ಊರುಗಳತ್ತ ನಡೆದೇ ಹೋಗಲು ತೀರ್ಮಾನಿಸಿ ಹೊರಟರು. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಬೆಂಗಳೂರಿನಿಂದಲೂ ಸಾವಿರಾರು ಕಾರ್ಮಿಕರು ಉತ್ತರ ಕರ್ನಾಟಕದ ತಮ್ಮ ಊರುಗಳತ್ತ ನಡೆದೇ ಸಾಗಿದರು.‌ ಈ ಮಧ್ಯೆ, ಸಾಗರೋಪಾದಿಯಲ್ಲಿ ನಡೆದು ಹೋಗುತ್ತಿದ್ದ ಮಂದಿಗೆ ಅನ್ನ, ಆಹಾರ, ನೀರು, ಸಾರಿಗೆ ಮತ್ತು ವೈದ್ಯಕೀಯ ಸೇವೆ ಒದಗಿಸಲು ಆಯಾಯ ರಾಜ್ಯ ಸರ್ಕಾರಗಳು ಹೆಣಗಾಡಿದವು. ಹಳ್ಳಿಗರು ಹಸಿದ ಕಾರ್ಮಿಕರಿಗೆ ಅನ್ನ - ನೀರು ಪೂರೈಸಿದರು. ರಾಜ್ಯ ಸರ್ಕಾರಗಳು ಸರ್ಕಾರಗಳು ವಾಹನ ಪೂರೈಸಲು , ವೈದ್ಯಕೀಯ ಸೇವೆ ಹೊಂದಿಸಲು ಹೆಣಗಾಡಿದವು. ಈ ನಡುವೆ ಹಲವು ಮಂದಿ ಉಪವಾಸದಿಂದಲೇ ಮುಂದೆ ಸಾಗಿ. ಕೆಲವರು ಪ್ರಾಣವನ್ನೆ ಕಳೆದುಕೊಂಡಿದ್ದರು. ಹೀಗಾಗಿ, ಏಪ್ರಿಲ್ 10 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರಗೆ ಗ್ರಾಮ ಸೇವಾ ಸಂಘದ ಮೂಲಕ ಪ್ರಸನ್ನ ಅವರು ಉಪವಾಸ ಅಭಿಯಾನ ಆರಂಭಿಸಲಿದ್ದಾರೆ.

ಉಪವಾಸ ಕೈಗೊಳ್ಳಲು ಪ್ರಸನ್ನ ಕರೆ

ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟ - ಸಂಕಟಗಳಿಗಾಗಿ ನಾವೆಲ್ಲರೂ ಒಂದು ದಿನದ ಉಪವಾಸದಲ್ಲಿ ಜೊತೆ ಸೇರೋಣ ಎಂದು ಪ್ರಸನ್ನ ಕರೆಕೊಟ್ಟಿದ್ದಾರೆ.

ABOUT THE AUTHOR

...view details