ಕರ್ನಾಟಕ

karnataka

ETV Bharat / state

ಮುಗಿಯದ ಫಾಸ್ಟ್​ಟ್ಯಾಗ್ ಗೊಂದಲ: ಸವಾರರು, ಟೋಲ್ ಸಿಬ್ಬಂದಿ ನಡುವೆ ಜಟಾಪಟಿ

ಟೋಲ್​ ಗೇಟ್​ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಜಾರಿಗೊಳಿಸಿರುವ ಫಾಸ್ಟ್​​ಟ್ಯಾಗ್​ನಿಂದಲೇ ಹೆಚ್ಚು ಗೊಂದಲಗಳು ಮತ್ತು ಸಮಸ್ಯೆ ಉಂಟಾಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

Fast tag confusion over unfinished
ಸವಾರರು, ಟೋಲ್ ಸಿಬ್ಬಂದಿ ನಡುವೆ ಜಟಾಪಟಿ

By

Published : Jan 16, 2020, 4:28 AM IST

ಆನೇಕಲ್​:ಟೋಲ್​ ಗೇಟ್​​​ಗಳಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಫಾಸ್ಟ್ ​​ಟ್ಯಾಗ್ ಅಳವಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೂ, ಬಹಳಷ್ಟು ಜನ ಫಾಸ್ಟ್​ಟ್ಯಾಗ್​ ಅಳವಡಿಸಿಕೊಳ್ಳದ ಪರಿಣಾಮ ಗೊಂದಲ ಮುಂದುವರೆದಿದೆ.

ಈ ವಿಚಾರಕ್ಕೆ ಬೆಂಗಳೂರು-ತಮಿಳುನಾಡು ರಾಷ್ಟ್ರೀಯ ಹೆದ್ದಾರಿ-7ರ ಅತ್ತಿಬೆಲೆ ಟೋಲ್ ಬಳಿ ಬುಧವಾರ ಬೆಳಗ್ಗೆ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಜಟಾಪಟಿ ನಡೆದಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವಂತಾಯ್ತು.

ಸವಾರರು, ಟೋಲ್ ಸಿಬ್ಬಂದಿ ನಡುವೆ ಜಟಾಪಟಿ

ಈ ಟೋಲ್​​ ಗೇಟ್​​ನಲ್ಲಿ ಫಾಸ್ಟ್​​ಟ್ಯಾಗ್ ಅಳವಡಿಸಿರುವ ವಾಹನಗಳು ತೆರಳಲು 3 ಲೇನ್ ಹಾಗೂ ನಗದು ಪಾವತಿಸುವ ವಾಹನಗಳಿಗಾಗಿ 2 ಲೇನ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಫಾಸ್ಟ್​ಟ್ಯಾಗ್​ ಅಳವಡಿಸದೆ ಫಾಸ್ಟ್​ಟ್ಯಾಗ್​​ ಲೇನ್​ನಲ್ಲಿ ಬಂದರೆ ಸವಾರರು ಎರಡು ಪಟ್ಟು ಹಣ ಪಾವತಿಸಬೇಕು. ಇದೇ ವಿಚಾರಕ್ಕಾಗಿ ವಾಹನ ಚಾಲಕ ಹಾಗೂ ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ವಾಹನ ಸವಾರರೊಬ್ಬರು ಮಾತನಾಡಿ, ಫಾಸ್ಟ್​​ಟ್ಯಾಗ್​​ನಿಂದ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ. 100 ಮೀಟರ್ ರಸ್ತೆ ಬಳಸಿದರೂ ಹಣ ಕಟ್ಟಬೇಕಾಗಿದೆ. ಫಾಸ್ಟ್​ಟ್ಯಾಗ್ ಸ್ಕ್ಯಾನ್ ಆಗದಿದ್ದರೆ ಹಿಂದಕ್ಕೆ ಹೋಗಿ ಬರಬೇಕಾಗುತ್ತದೆ. ಇದು ತುಂಬಾ ಸಮಸ್ಯೆ ತಂದೊಡ್ಡುತ್ತಿದೆ. ಇದಕ್ಕಿಂತ ಮೊದಲಿದ್ದ ವ್ಯವಸ್ಥೆಯೇ ಹೆಚ್ಚು ಉತ್ತಮ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details