ಬೆಂಗಳೂರು : ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ನೈಸ್ ರೋಡ್ ಕೆಂಗೇರಿ ಜಂಕ್ಷನ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೆಂಗೇರಿ ಜಂಕ್ಷನ್ ನಲ್ಲಿ ಪೊಲೀಸ್ ಸರ್ಪಗಾವಲು: 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ - ಕೆಂಗೇರಿ ಜಂಕ್ಷನ್ ನಲ್ಲಿ ಪೊಲೀಸ್ ಸರ್ಪಗಾವಲು
ಕೆಂಗೇರಿ ಉಪ ವಿಭಾಗದ ಪೊಲೀಸರಿಂದ ಭದ್ರತೆ ಒದಗಿಸಲಾಗಿದ್ದು, 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು ರೈತರು ಟ್ರ್ಯಾಕ್ಟರ್ ಮುಖಾಂತರ ಬೆಂಗಳೂರಿಗೆ ಒಳ ಪ್ರವೇಶಿಸದಂತೆ ಎಲ್ಲಾ ರೀತಿಯಲ್ಲಿ ತಯಾರಿ ನಡೆಸಲಾಗಿದೆ. ಕೆಂಗೇರಿ ಉಪ ವಿಭಾಗದ ಪೊಲೀಸರಿಂದ ಭದ್ರತೆ ಒದಗಿಸಲಾಗಿದ್ದು, 500ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿದೆ. ಭದ್ರತೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ. 200 ಹೋಮ್ ಗಾರ್ಡ್, 200 ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಹೆಚ್ಚುವರಿಯಾಗಿ 3 ಕೆ. ಎಸ್. ಆರ್.ಪಿ ತುಕಡಿಗಳು ಜಮಾವಣೆಗೊಂಡಿದ್ದು, ಮುನ್ನೆಚ್ಚರಿಕೆಯಾಗಿ 5 ಖಾಲಿ ಬಸ್ ನಿಲ್ಲಿಸಿಕೊಳ್ಳಲಾಗಿದೆ.
ಓದಿ : ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್