ಕರ್ನಾಟಕ

karnataka

ETV Bharat / state

ರೈತರಿಂದ ದಿಢೀರ್ ಪ್ರತಿಭಟನೆ : ಭೂ ಸುಧಾರಣೆ ಕಾಯ್ದೆ ವಿರುದ್ಧ ರಸ್ತೆ ತಡೆದು ಆಕ್ರೋಶ

ಐಕ್ಯ ಹೋರಾಟ ಸಂಘಟನೆಯ ಸದಸ್ಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಕುರುಬೂರು ಶಾಂತ ಕುಮಾರ್, ಬಡಗಲೂರು ನಾಗೇಂದ್ರ ಹಾಗೂ ಹಲವು ರೈತರು ಭಾಗಿಯಾಗಿದ್ದಾರೆ..

farmers protest
ರೈತರ ಪ್ರತಿಭಟನೆ

By

Published : Dec 8, 2020, 7:03 PM IST

ಬೆಂಗಳೂರು :ವಿಧಾನ ಪರಿಷತ್​​ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಕಾಂಗ್ರೆಸ್ ಒತ್ತಾಯದಂತೆ ವಿಧೇಯಕವನ್ನು ಮತಕ್ಕೆ ಹಾಕಿದ್ದ ಹಿನ್ನೆಲೆಯಲ್ಲಿ 37-21 ಮತಗಳ ಅಂತರದಲ್ಲಿ ವಿಧೇಯಕ ಅನುಮೋದನೆ ಪಡೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರ ಪ್ರತಿಭಟನೆ

ಮತಕ್ಕೆ ಹಾಕುವ ಮೊದಲು ಸಚಿವ ಆರ್​.ಅಶೋಕ್ 'ಕೈ ಎತ್ತಿ' ಮತ ಚಲಾಯಿಸಿ ಎಂದು ಸಲಹೆ ನೀಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಮತಕ್ಕೆ ಹಾಕುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸದಸ್ಯರಿಗೆ ವಿಧೇಯಕದ ಪರ ಮತ ಹಾಕಲು ಅವಕಾಶ ನೀಡಲಾಯಿತು.

ಇದನ್ನೂ ಓದಿ:ಭೂ ಸುಧಾರಣಾ ತಿದ್ದುಪಡಿ, ರೈತರ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ : ಎಸ್.ಆರ್.ಪಾಟೀಲ್

ಕೊನೆಯಲ್ಲಿ ವಿಧೇಯಕಕ್ಕೆ ಪರಿಷತ್​ನಲ್ಲಿ ಅನುಮೋದನೆ ದೊರೆತಿದ್ದು, ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೌರ್ಯ ಸರ್ಕಲ್​ನಲ್ಲಿ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಕ್ಯ ಹೋರಾಟ ಸಂಘಟನೆಯ ಸದಸ್ಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಕುರುಬೂರು ಶಾಂತ ಕುಮಾರ್, ಬಡಗಲೂರು ನಾಗೇಂದ್ರ ಹಾಗೂ ಹಲವು ರೈತರು ಭಾಗಿಯಾಗಿದ್ದಾರೆ.

ABOUT THE AUTHOR

...view details