ಕರ್ನಾಟಕ

karnataka

ETV Bharat / state

ಪ್ರತಿಭಟನೆ ಮಧ್ಯೆ ಆ್ಯಂಬುಲೆನ್ಸ್​​ಗೆ ದಾರಿ ಮಾಡಿಕೊಟ್ಟ ರೈತರು!

ರೈತರ ಜೊತೆ ಟೊಯೋಟಾ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ- ರಾಜ್ಯ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ಮಾಡ್ತಿದೆ. ಅದೇ ರೀತಿ ಕಾರ್ಮಿಕ ಕಾಯ್ದೆಗಳನ್ನೂ ತಿದ್ದುಪಡಿ ಮಾಡ್ತಿವೆ. ಕಾರ್ಪೊರೇಟ್ ಅಥವಾ ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ವಲಯ ಹೋಗಿಬಿಟ್ರೆ, ಯಾವ ರೀತಿ ಹಿಂಸೆ ಆಗುತ್ತದೆ ಎಂಬುದಕ್ಕೆ ನಾವೇ ಜೀವಂತ ಸಾಕ್ಷಿ..

ಬಾರುಕೋಲು ಪ್ರತಿಭಟನೆ
ಬಾರುಕೋಲು ಪ್ರತಿಭಟನೆ

By

Published : Dec 9, 2020, 4:07 PM IST

ಬೆಂಗಳೂರು :ರೈತರು ನಡೆಸುತ್ತಿರುವ ಬಾರುಕೋಲು ಪ್ರತಿಭಟನಾ ರ‍್ಯಾಲಿ ಫ್ರೀಡಂ ಪಾರ್ಕ್​ ಹತ್ತಿರ ಬಂದಿದ್ದು, ವಿಧಾನಸೌಧದತ್ತ ಹೋಗದಂತೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಈ ಹಿನ್ನೆಲೆ ರೈತರು ರಸ್ತೆಯಲ್ಲೇ ಕುಳಿತಿದ್ದು, ಈ ಮಧ್ಯೆ ಸಾಲುಮರದ ತಿಮ್ಮಕ್ಕ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡಿದ್ರು.

ರೈತರ ಪ್ರತಿಭಟನೆ ಮಧ್ಯೆ ಆ್ಯಂಬುಲೆನ್ಸ್ ಬಂದಾಗ ತಡಮಾಡದೆ ದಾರಿ ಮಾರಿಕೊಟ್ಟರು. ಇದೇ ವೇಳೆ ಕೃಷಿ ಸಚಿವ ಬಿ ಸಿ ಪಾಟೀಲ್​ಗೆ ಕೋಡಿಹಳ್ಳಿ ಚಂದ್ರಶೇಖರ್ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಬಿ ಸಿ ಪಾಟೀಲ್ ಸಚಿವನಾದ್ಮೇಲೆ ಏನೇನ್ ಮಾಡಿದ್ದಾನೆ ಅಂತಾ ಎಲ್ಲಾ ಇದೆ. ಬಹಿರಂಗ ಮಾಡಿದ್ರೆ ತಲೆ ಎತ್ತಿ ಓಡಾಡದಂತೆ ಮಾಡ್ಬೇಕಾಗುತ್ತದೆ ಎಂದು ಹೇಳುವ ಮೂಲಕ ಕಿಡಿಕಾರಿದ್ರು.

ಇದನ್ನು ಓದಿ:ಹಲವು ಭಾಗ್ಯಗಳಿಗೆ ‘ಸಿದ್ದರಾಮನ ಹುಂಡಿ’ಯಿಂದ ಹಣ ತಂದಿದ್ರಾ?: ಹೆಚ್​ಡಿಕೆ

ರೈತರ ಜೊತೆ ಟೊಯೋಟಾ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ- ರಾಜ್ಯ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ಮಾಡ್ತಿದೆ. ಅದೇ ರೀತಿ ಕಾರ್ಮಿಕ ಕಾಯ್ದೆಗಳನ್ನೂ ತಿದ್ದುಪಡಿ ಮಾಡ್ತಿವೆ. ಕಾರ್ಪೊರೇಟ್ ಅಥವಾ ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ವಲಯ ಹೋಗಿಬಿಟ್ರೆ, ಯಾವ ರೀತಿ ಹಿಂಸೆ ಆಗುತ್ತದೆ ಎಂಬುದಕ್ಕೆ ನಾವೇ ಜೀವಂತ ಸಾಕ್ಷಿ.

ಬೆಳಗ್ಗೆಯಿಂದ ಒಂದೇ ಸಮನೆ ಕೆಲಸ ಮಾಡುತ್ತೇವೆ. ರಜೆ ಬೇಕು ಅಂದ್ರೂ ಸಿಗುವುದಿಲ್ಲ. ಆರೋಗ್ಯ ಸಮಸ್ಯೆ ಬಂದರೂ ರಜೆ ಸಿಗುವುದಿಲ್ಲ. ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಪರಿಸ್ಥಿತಿಯಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗಳು ದುಡಿಸಿಕೊಳ್ತವೆ. ಸರ್ಕಾರಗಳು ರೈತರು-ಕಾರ್ಮಿಕರನ್ನು ಉಳಿಸಿಕೊಳ್ಳಬೇಕಿದೆ ಎಂದು ಟೊಯೋಟಾ ಕಂಪನಿ ಕಾರ್ಮಿಕರು ಹೇಳಿದರು.

ABOUT THE AUTHOR

...view details