ಕರ್ನಾಟಕ

karnataka

ETV Bharat / state

ರೈತರಿಗೆ ಸಿಗದ ರಾಜ್ಯೋತ್ಸವ ಪ್ರಶಸ್ತಿ, ಸಿಎಂ ಸಭೆಯಲ್ಲೇ ಕೋಡಿಹಳ್ಳಿ‌ ಚಂದ್ರಶೇಖರ್ ಅಸಮಧಾನ - Koodihalli Upset ForFarmers' disregard for Rajyotsava award

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರೈತರನ್ನು ಪರಿಗಣಿಸದೆ ಇರುವುದು ಬಹಳ ನೋವಿನ ಸಂಗತಿ. ರೈತರ ಮೇಲೆ ಸಿಎಂ ಬಿಎಸ್​ವೈಗೆ ಇರುವ ಕಾಳಜಿ ಇದೇನಾ ಎಂದು ಸಿಎಂ ಎದುರಲ್ಲೇ ಕೋಡಿಹಳ್ಳಿ‌ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸಿಎಂ ಜೊತೆ ರೈತರ ಸಭೆ

By

Published : Nov 12, 2019, 6:57 PM IST

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರೈತರನ್ನು ಪರಿಗಣಿಸದೆ ಇರುವುದು ಬಹಳ ನೋವಿನ ಸಂಗತಿ. ರೈತರ ಮೇಲೆ ಸಿಎಂ ಬಿಎಸ್​ವೈಗೆ ಇರುವ ಕಾಳಜಿ ಇದೇನಾ ಎಂದು ಸಿಎಂ ಎದುರಲ್ಲೇ ಕೋಡಿಹಳ್ಳಿ‌ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕೋಡಿಹಳ್ಳಿ‌ ಚಂದ್ರಶೇಖರ್ ಅಸಮಧಾನ

ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಡೆಗೆ ರೈತ ಮುಖಂಡರಿಂದ ಅಸಮಾಧಾನ ವ್ಯಕ್ತವಾಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ರೈತರೊಂದಿಗೆ ಸಭೆ ಆರಂಭಗೊಳ್ಳುತ್ತಿದ್ದಂತೆ ರಾಜ್ಯೋತ್ಸವ ಪ್ರಶಸ್ತಿಗೆ ರೈತರನ್ನು ಪರಿಗಣಿಸದೆ ಇರುವುದನ್ನು ಪ್ರಸ್ತಾಪಿಸಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರು.

ನಂತರ ಅತಿವೃಷ್ಟಿಯಲ್ಲಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಸಿಕ್ಕಿಲ್ಲ ಹೀಗಾಗಿ ಆದಷ್ಟು ಬೇಗ ಪರಿಹಾರ ಕೊಡಿಸಿ ಎಂದು ಸಭೆಯಲ್ಲಿ ಸಿಎಂಗೆ ಮನವಿ ಮಾಡಲಾಯಿತು. ಅಲ್ಲದೆ ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರ ಪರಿಹಾರ ಕಾರ್ಯಗಳನ್ನು ಮಾಡುವಂತೆ, ರೈತರಿಗೆ ಬ್ಯಾಂಕ್​ಗಳಿಂದ ಕೊಡುತ್ತಿರುವ‌ ನೋಟಿಸ್ ತಪ್ಪಿಸುವಂತೆ ಒತ್ತಾಯ ಮಾಡಲಾಯಿತು.

ABOUT THE AUTHOR

...view details