ಕರ್ನಾಟಕ

karnataka

ETV Bharat / state

ಗೊಂದಲಕ್ಕೆ ತೆರೆ ಎಳೆದ ರೈತ ಸಂಘಟನೆಗಳು: ಸೆ.28 ರಂದು ಕರ್ನಾಟಕ ಬಂದ್ ಫಿಕ್ಸ್ - ಸೆ.28 ರಂದು ಕರ್ನಾಟಕ ಬಂದ್

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ವಿರುದ್ದ ಸೆಪ್ಟೆಂಬರ್​​ 28 ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿವೆ.

farmers announced Karnataka band on sepetember 28th
ಕರ್ನಾಟಕ ಬಂದ್ ಫಿಕ್ಸ್

By

Published : Sep 23, 2020, 6:43 PM IST

ಬೆಂಗಳೂರು: ಬಂದ್ ವಿಚಾರದಲ್ಲಿ ರೈತ ಸಂಘಟನೆಗಳಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ಶಮನಗೊಂಡ ಹಿನ್ನೆಲೆಯಲ್ಲಿ ಒಕ್ಕೊರಲಿನಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ವಿರುದ್ದ ಕರ್ನಾಟಕ ಬಂದ್ ಕರೆ ಕೊಟ್ಟಿವೆ.

ರೈತ ಮುಖಂಡ ಕಾಳಪ್ಪ ಮಾತನಾಡಿ, ರಾಜ್ಯ ಅಧಿವೇಶದಲ್ಲಿ ಮಸೂದೆಗಳನ್ನು ಮಂಡಿಸಿದ್ದಾರೆ. ಐಕ್ಯ ಸಮಿತಿಯಿಂದ ಒಪ್ಪುವುದಿಲ್ಲ ಸೆ.28ರಂದು ಕರ್ನಾಟಕ ಬಂದ್ ನಡೆಯಲಿದೆ.. ಅದೇ ರೀತಿ ಸೆ.25ರಂದು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು‌ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ. ಅಂದು ನಗರ ಮೈಸೂರು ಬ್ಯಾಂಕ್ ಬಳಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಯಲಿದೆ.. ಐಕ್ಯ ಸಮಿತಿಯಡಿ 28 ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಐಕ್ಯ ಹೋರಾಟ ಸಮಿತಿಯಿಂದ ಸಪ್ಟೆಂಬರ್ 25 ರಂದು ಹೆದ್ದಾರಿ ಬಂದ್ ಹಾಗೂ ಜೈಲ್ ಭರೊ ಮಾಡಲಿದ್ದೇವೆ.. ಸಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ.. ಎಲ್ಲರೂ ಒಂದಾಗಿ ಈ ಎರಡು ಬೃಹತ್ ಪ್ರತಿಭಟನೆಗಳನ್ನು ಮಾಡಲಿದೆ ಎಂದರು.

ABOUT THE AUTHOR

...view details