ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ಜನಸೇವೆಗೆ ಅವಕಾಶ ಸಿಗುವುದು ತುಂಬಾ ಕಷ್ಟ. ಸಿಕ್ಕರೆ ಅದನ್ನು ಉಳಿಸಿಕೊಳ್ಳೋದು ಇನ್ನೂ ಕಷ್ಟ. ಈ ನಡುವೆ ಕೊನೆವರೆಗೂ ಜೈಪಾಲ್ ರೆಡ್ಡಿ ಅವರು ಜನರ ನಂಬಿಕೆ ಉಳಿಸಿಕೊಂಡಿದ್ದರು ಎಂದು ಮಾಜಿ ಸ್ಪೀಕರ್ ಕೆ.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ಟಿ.ಸುಬ್ಬರಾಮಿ ಪೌಂಡೇಶನ್ ವತಿಯಿಂದ ನಗರದ ತೆಲುಗು ವಿಜ್ಞಾನ ಸಮಿತಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರ ಶ್ರದ್ಧಾಂಜಲಿ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೈಪಾಲ್ ರೆಡ್ಡಿ ಅವರು ಚಿಕ್ಕ ವಯಸ್ಸಿನಲ್ಲೇ ಪೊಲಿಯೋದಿಂದ ಅಂಗವಿಕಲತೆ ಸಮಸ್ಯೆ ಅನುಭವಿಸಿದ್ದರು. ಇದರಿಂದ ಎದೆಗುಂದದೆ 27ನೇ ವಯಸ್ಸಿಗೆ ಮೊದಲ ಬಾರಿ ಶಾಸಕರಾಗಿ ಅನಂತರ ಹಂತ ಹಂತವಾಗಿ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರಾಗಿದ್ದರು.