ಕರ್ನಾಟಕ

karnataka

ETV Bharat / state

ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಡಿಸಿಎಂ ಪರಮೇಶ್ವರ್​ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಕಲಾಪಕ್ಕೆ ಸಚಿವರು ಗೈರಾಗಲಿದ್ದಾರೆ. ಅಲ್ಲದೇ ಇಂದು ಪರಮ್​ ನಿವಾಸಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಭೇಟಿ ನೀಡಿ ಐಟಿ‌ ದಾಳಿಯ ಕುರಿತು ಮಾತುಕತೆ ನಡೆಸಿದ್ದಾರೆ.

Priyank Kharge

By

Published : Oct 12, 2019, 10:52 AM IST

ಬೆಂಗಳೂರು:ಪರಮೇಶ್ವರ್ ಮನೆ ಮೇಲೆ ಸದ್ಯ ಐಟಿ ದಾಳಿ ಮುಗಿದಿದ್ದು, ವಿಧಾನ ಸೌಧದಲ್ಲಿ ನಡೆಯುತ್ತಿರುವ ಕಲಾಪಕ್ಕೆ ಪರಮೇಶ್ವರ್ ಅವರು ಗೈರು ಹಾಜರಾಗಲಿದ್ದಾರೆ.

ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಸದ್ಯ ತುಮಕೂರಿನಲ್ಲಿ ಇನ್ನು ಐಟಿ ದಾಳಿ ಮುಂದುವರೆದಿದ್ದು, ಪರಂ​ ಅವರನ್ನು ತುಮಕೂರಿಗೆ ಬರುವಂತೆ ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಹೀಗಾಗಿ ತುಮಕೂರಿಗೆ ಪರಮೇಶ್ವರ್ ತೆರಳಿ ಶಿಕ್ಷಣ ಸಂಸ್ಥೆಯಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳ‌ ಕುರಿತು ಮಾಹಿತಿ ನೀಡಲಿದ್ದಾರೆ.

ಸದ್ಯ ಸದಾಶಿವ ನಗರ ನಿವಾಸದಲ್ಲಿ ಪರಮೇಶ್ವರ್ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದು, ಇಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಭೇಟಿ ನೀಡಿ ಐಟಿ‌ ದಾಳಿಯ ಕುರಿತು ಪರಮೇಶ್ವರ್ ಜೊತೆ ಮಾತುಕತೆ ನಡೆಸಿದ್ದಾರೆ.

ABOUT THE AUTHOR

...view details