ದೊಡ್ಡಬಳ್ಳಾಪುರ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ, ಲಾಕ್ಡೌನ್ ಎಫೆಕ್ಟ್ನಿಂದಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಕುಸಿದಿದೆ. ಇದರಿಂದ ಕಂಗಾಲಾದ ರೈತನೋರ್ವ ಟೊಮ್ಯಾಟೋವನ್ನು ಕಸಕ್ಕೆ ಸುರಿದಿರುವ ಘಟನೆ ನಡೆದಿದೆ.
ತಾಲೂಕಿನ ಗಡಿ ಭಾಗದ ಗ್ರಾಮ ಗಿಂಗಿರ್ಲಹಳ್ಳಿಯ ರೈತ ಗೋವಿಂದರಾಜು ಎಂಬಾತ ತಮ್ಮ 3 ಎಕರೆ ಜಾಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಲಾಕ್ಡೌನ್ ಪರಿಣಾಮ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಇಳಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿನ ಟೊಮ್ಯಾಟೋ ಬೇರೆ ಕಡೆ ಹೋಗುತ್ತಿಲ್ಲ. ಪರಿಣಾಮ ಪ್ರತಿ ಬಾಕ್ಸ್ ಟೊಮ್ಯಾಟೋ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬೆಳೆಗೆ ಹಾಕಿದ ಹಣ ಸಹ ರೈತ ಗೋವಿಂದ್ ರಾಜುಗೆ ಸಿಕ್ಕಲ್ಲ. ಇದರಿಂದ ಬೇಸರಗೊಂಡು ಬೆಳೆದಿದ್ದ ಬೆಳೆಯನ್ನು ಕಸಕ್ಕೆ ಹಾಕಿದ್ದಾನೆ.