ಕರ್ನಾಟಕ

karnataka

By

Published : Dec 8, 2020, 6:27 PM IST

ETV Bharat / state

ರೈತ, ಕನ್ನಡಪರ ಸಂಘಟನೆಗಳಿಂದ‌‌ ನಾಳೆ ವಿಧಾನಸೌಧ ಮುತ್ತಿಗೆ: ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

ಕನ್ನಡಪರ ಹಾಗೂ ರೈತಪರ ಸಂಘಟನೆಗಳು ನಗರ ಕೇಂದ್ರ ರೈಲು ನಿಲ್ದಾಣದಿಂದ‌ ಪ್ರೀಡಂ ಪಾರ್ಕ್ ಮಾರ್ಗವಾಗಿ ವಿಧಾನಸೌಧ‌ದವರೆಗೂ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡುವಂತೆ ಮನವಿ ಪತ್ರ ಸಲ್ಲಿಸಿವೆ. ಈ ಸಂಬಂಧ ಮನವಿಯನ್ನು ಪರಿಶೀಲಿಸುತ್ತಿದ್ದೇವೆ. ನಾಳಿನ ಪರಿಸ್ಥಿತಿ ಅವಲೋಕಿಸಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಸೌಮೆಂದ್ರ ಮುಖರ್ಜಿ ತಿಳಿಸಿದ್ದಾರೆ.

soumendra Mukharji
ಸೌಮೆಂದ್ರ ಮುಖರ್ಜಿ

ಬೆಂಗಳೂರು: ಭಾರತ್ ಬಂದ್ ಮುಗಿದ ಬೆನ್ನಲ್ಲೇ ವಿವಿಧ ರೈತ, ಕಾರ್ಮಿಕ ಪರ ಸಂಘಟನೆಗಳಿಂದ ನಾಳೆ ವಿಧಾನಸೌಧ ಹಾಗೂ ರಾಜಭವನದ ಮುಂದೆ ಕರೆ ನೀಡಲಾಗಿರುವ ಬಾರುಕೋಲು ಚಳವಳಿ ಹಿನ್ನೆಲೆ‌ ಮುಂಜಾಗ್ರತಾ ಕ್ರಮವಾಗಿ ನಗರ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಸೌಮೆಂದ್ರ ಮುಖರ್ಜಿ, ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್​ ಆಯುಕ್ತ

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ, ನಾಳೆ ರೈತ ಹಾಗೂ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಿನ್ನೆಲೆ ವಿಧಾನಸೌಧ ಹಾಗೂ ರಾಜಭವನಕ್ಕೆ ಮೂವರು ಡಿಸಿಪಿ, 10 ಎಸಿಪಿ, 30 ಇನ್ಸ್​ಪೆಕ್ಟರ್​ ಹಾಗೂ 70ಕ್ಕೂ ಅಧಿಕ ಪಿಎಸ್ಐ ಸೇರಿದಂತೆ 1000 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಜೊತೆಗೆ ಹೆಚ್ಚುವರಿಯಾಗಿ 40 ಕೆಎಸ್​​ಆರ್​ಪಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಿದ್ದೇವೆ ಎಂದಿದ್ದಾರೆ.

ಓದಿ:ಹೋಲ್ಡಿಂಗ್ಸ್ ಗಳಿಗೆ ಕಡಿವಾಣ ಹಾಕಲು ಹೊಸ ಜಾಹೀರಾತು ನೀತಿ

ನಗರ ಕೇಂದ್ರ ರೈಲು ನಿಲ್ದಾಣದಿಂದ‌ ಪ್ರೀಡಂ ಪಾರ್ಕ್ ಮಾರ್ಗವಾಗಿ ವಿಧಾನಸೌಧ‌ದವರೆಗೂ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡುವಂತೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದ್ದಾರೆ. ಈ ಸಂಬಂಧ ಮನವಿಯನ್ನು ಪರಿಶೀಲಿಸುತ್ತಿದ್ದೇವೆ. ನಾಳಿನ ಪರಿಸ್ಥಿತಿ ಅವಲೋಕಿಸಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details