ಕರ್ನಾಟಕ

karnataka

ETV Bharat / state

ಜಿಕೆವಿಕೆ ಆವರಣದಲ್ಲಿ ಕೃಷಿಮೇಳ -2020ಕ್ಕೆ ಚಾಲನೆ.. ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಕೋವಿಡ್ ಬಳಿಕ ರೈತರೂ ಅನೇಕ ಸಮಸ್ಯೆ ಎದುರಿಸಿದರು. ಕೃಷಿ ಉತ್ಪನ್ನದ ಮಾರಾಟ, ಸಂರಕ್ಷಣೆ ಕಷ್ಟ ಆಯಿತು. ಆದರೂ ಉತ್ಪಾದನೆ ಕಡಿಮೆ ಆಗಿಲ್ಲ. ಈ ವರ್ಷ ಉತ್ತಮ ಮಳೆಯೂ ಆಗಿರುವುದರಿಂದ ಕೃಷಿ ಪ್ರದೇಶ ವಿಸ್ತರಣೆ ಆಗಿದೆ.

farm-fair-2020-started-from-today-in-gkvk-campus
ಜಿಕೆವಿಕೆ ಕೃಷಿಮೇಳ-2020ಕ್ಕೆ ಚಾಲನೆ.

By

Published : Nov 11, 2020, 4:10 PM IST

Updated : Nov 11, 2020, 5:06 PM IST

ಬೆಂಗಳೂರು :ನಗರದ ಜಿಕೆವಿಕೆ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿರುವ ಮೂರು ದಿನದ ಕೃಷಿಮೇಳ-2020ಕ್ಕೆ ಚಾಲನೆ ದೊರೆತಿದೆ. ಕೋವಿಡ್ ಹಿನ್ನೆಲೆ ಈ ಬಾರಿ ಡಿಜಿಟಲ್ ಕೃಷಿಮೇಳ ಆಯೋಜಿಸಲಾಗಿದೆ. ದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್​​​ನ ಉಪಮಹಾನಿರ್ದೇಶಕ ಡಾ.ಎ.ಕೆ ಸಿಂಗ್ ವರ್ಚುವಲ್ ಮೂಲಕ ಕೃಷಿಮೇಳ ಉದ್ಘಾಟಿಸಿದರು.

ಕೃಷಿಮೇಳ ಉದ್ಘಾಟಿಸಿ ಬಳಿಕ ಮಾತನಾಡಿದ ಎ.ಕೆ ಸಿಂಗ್, ಬೆಂಗಳೂರು ವಿವಿ ಹೊಸ ಹೊಸ ತಂತ್ರಜ್ಞಾನಗಳನ್ನು ಸಂಶೋಧಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರ ರೈತರ ಆದಾಯವನ್ನು ದ್ವಿಗುಣ ಮಾಡಲು ಕೆಲಸ ಮಾಡುತ್ತಿದೆ. ಇದಕ್ಕೆ ಟೆಕ್ನಾಲಜಿ ಅಗತ್ಯ. ಇದರ ಸೌಲಭ್ಯ ರೈತರ ಹೊಲವನ್ನು ತಲುಪಬೇಕು.

ಜಿಕೆವಿಕೆ ಕೃಷಿಮೇಳ-2020ಕ್ಕೆ ಚಾಲನೆ..ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ದೇಶದಲ್ಲಿ ಒಂದು ಮಾರುಕಟ್ಟೆ ವ್ಯವಸ್ಥೆಯನ್ನು ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಎಲ್ಲಿಂದ ಬೇಕಾದರೂ, ಯಾರಿಗೆ ಬೇಕಾದರೂ ರೈತರು ತಮ್ಮ ಉತ್ಪನ್ನವನ್ನು ಮಾರಾಟವಾಗುವ ಹಾಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದರು.

ರಾಜ್ಯದ ಉತ್ಪನ್ನಗಳನ್ನು ಬೇರೆ ಬೇರೆ ರಾಜ್ಯ, ದೇಶಗಳಿಗೂ ಮಾರಾಟ ಮಾಡಬಹುದು. 290 ಮಿಲಿಯನ್ ಟನ್ ಆಹಾರ ಉತ್ಪಾನೆ ಮಾಡಿದರೂ, ರೈತರಿಗೆ ಅದಕ್ಕೆ ತಕ್ಕದಾದ ಬೆಲೆ ಸಿಗುತ್ತಿಲ್ಲ. ಶೇ.14 ರಿಂದ 15ರಷ್ಟು ವ್ಯರ್ಥವಾಗಿ ಹಾಳಾಗುತ್ತಿದೆ. ಇದನ್ನು ಉಳಿಸಲು ಪ್ರಯತ್ನ ನಡೆಯುತ್ತಿದೆ ಎಂದರು.

ಡಾ.ಕೆ.ಎಂ ಇಂದಿರೇಶ್ ಮಾತನಾಡಿ, ಕೋವಿಡ್ ಬಳಿಕ ರೈತರೂ ಅನೇಕ ಸಮಸ್ಯೆ ಎದುರಿಸಿದರು. ಕೃಷಿ ಉತ್ಪನ್ನದ ಮಾರಾಟ, ಸಂರಕ್ಷಣೆ ಕಷ್ಟ ಆಯಿತು. ಆದರೂ ಉತ್ಪಾದನೆ ಕಡಿಮೆ ಆಗಿಲ್ಲ. ಈ ವರ್ಷ ಉತ್ತಮ ಮಳೆಯೂ ಆಗಿರುವುದರಿಂದ ಕೃಷಿಪ್ರದೇಶ ವಿಸ್ತರಣೆ ಆಗಿದೆ. ರಾಮನಗರ, ಹಾಸನ, ತುಮಕೂರಿನ ಸಾಧಕ ರೈತರಿಗೆ ಪ್ರಶಸ್ತಿ ನೀಡಲಾಗ್ತಿದೆ. ಬಾಗಲಕೋಟೆಯಲ್ಲೂ ತೋಟಗಾರಿಕಾ ಮೇಳ ಆಯೋಜಿಸಲಾಗಿದೆ ಎಂದರು.

ಜಿಕೆವಿಕೆ ಆವರಣದಲ್ಲಿ ಕೃಷಿಮೇಳ -2020ಕ್ಕೆ ಚಾಲನೆ.

ಐಸಿಎಆರ್​​​ನ ಡಾ.ವಿ.ವೆಂಕಟಸುಬ್ರಮಣಿಯನ್ ಮಾತನಾಡಿ, ಕೃಷಿಗೆ ಸಾಕಷ್ಟು ಸವಾಲುಗಳಿದ್ದು, ಕೋವಿಡ್ ಕೂಡಾ ಹೊಸದಾಗಿ ಸೇರಿಕೊಂಡಿದೆ. ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರೈತರ ಖರ್ಚುವೆಚ್ಚ ಕಡಿಮೆ ಮಾಡಲು, ಮಾನ್ಸೂನ್ ಸಮಸ್ಯೆಗಳನ್ನು ಎದುರಿಸಲು ಕಾರ್ಯಕ್ರಮ ಆರಂಭಿಸಿದೆ, ರೈತರ ಉತ್ಪಾದನೆ ಹೆಚ್ಚಳ ಮಾಡಬೇಕಿದೆ.

ಆರ್ಯ ಕಾರ್ಯಕ್ರಮದ ಮೂಲಕ ಯುವಜನರಿಗೆ ಕೃಷಿ ಬಗ್ಗೆ ಒಲವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂದಿನಿ ಹಾಲಿನ ಬ್ರಾಂಡ್ ದೇಶದಲ್ಲಿ ಎರಡನೇ ಅತಿದೊಡ್ಡ ಬ್ರಾಂಡ್​ ಆಗಿದೆ ಎಂದರು. ಬಳಿಕ ರಾಮನಗರ , ಹಾಸನ, ತುಮಕೂರು ಜಿಲ್ಲೆಗಳ ಪ್ರಗತಿಪರ 17 ಮಂದಿ ರೈತರಿಗೆ ಅತ್ಯುತ್ತಮ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ಪುರಸ್ಕಾರ ಹಾಗೂ 60 ಮಂದಿ ಯುವ ಸಾಧಕ ರೈತರು, ರೈತಮಹಿಳೆಯರಿಗೆ ಪುರಸ್ಕರಿಸಲಾಯಿತು.

ಮೇಳದಲ್ಲಿ 25ಕ್ಕೂ ಹೆಚ್ಚು ಮಳಿಗೆಗಳಿದ್ದು, ಹೆಚ್ಚಾಗಿ ಯಂತ್ರೋಪಕರಣಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ವಿವಿಧ ತಳಿಯ ಬೆಳೆ, ಕೃಷಿ ಯಂತ್ರೋಪಕರಣ, ಹೊಸ ಹೊಸ ತಳಿಗಳ ಪರಿಚಯದ ಜೊತೆಗೆ ರೈತರ ಪಾಲಿನ ಕಾಮಧೇನು ಎನಿಸಿಕೊಂಡಿರುವ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನುಗಾರಿಕೆ ಸಿಟಿ ಜನರ ಆಕರ್ಷಣೆಗೆ ಸಾಕ್ಷಿಯಾಯ್ತು. ವೆಬ್ ಸೈಟ್, ಯೂಟ್ಯೂಬ್​​​, ಫೇಸ್​ಬುಕ್, ಟ್ವಿಟರ್, ಇನ್ಸ್​​​​ಸ್ಟಾಗ್ರಾಮ್​, ವಾಟ್ಸಪ್ ಹಾಗೂ ಜೂಮ್ ಮೂಲಕ ಮೇಳ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಕೆವಿಕೆ ಕುಲಪತಿಗಳಾದ ಡಾ.ಎನ್.ರಾಜೇಂದ್ರ ಪ್ರಸಾದ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್, ಐಸಿಎಆರ್- ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ‌.ವಿ.ವೆಂಕಟ ಸುಬ್ರಮಣಿಯನ್ ಭಾಗಿಯಾಗಿದ್ದರು.

Last Updated : Nov 11, 2020, 5:06 PM IST

ABOUT THE AUTHOR

...view details