ಹೊಸಪೇಟೆ:ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಚೀತ್ರೀಕರಣ ಹೊಸಪೇಟೆ ತಾಲೂಕಿನ ಕಮಲಾಪುರ ಆರೆಂಜ್ ರೆಸಾರ್ಟ್ನಲ್ಲಿ ನಡೆಯುತ್ತಿದೆ. ಈ ವೇಳೆ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಸೆಟ್ ಬಳಿ ಜಮಾಯಿಸಿದ್ದರು.
ಹೊಸಪೇಟೆಯಲ್ಲಿ ನೆಚ್ಚಿನ ನಟ ಪುನೀತ್ರನ್ನು ನೋಡಲು ಮುಗಿಬಿದ್ಧ ಅಭಿಮಾನಿಗಳು - ಹೊಸಪೇಟೆ ಸುದ್ದಿ
ಹೊಸಪೇಟೆ ತಾಲೂಕಿನ ಕಮಲಾಪುರ ಆರೆಂಜ್ ರೆಸಾರ್ಟ್ನಲ್ಲಿ ಜೇಮ್ಸ್ ಚಿತ್ರದ ಚೀತ್ರೀಕರಣ ನಡೆಯುತ್ತಿದ್ದು, ಈ ವೇಳೆ ಪವರ್ಸ್ಟಾರ್ ಪುನೀತ್ ರಾಜಕುಮಾರ್ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ಪುನೀತ್ರನ್ನು ನೋಡಲು ಅಭಿಮಾನಿಗಳು ರೆಸಾರ್ಟ್ ಬಾಗಿಲಿನಲ್ಲಿ ಕಾದು ನಿಂತಿದ್ದರು. ಹೊರಗಿನಿಂದ ಕಾರು ರೆಸಾರ್ಟ್ ಒಳಗಡೆ ಹೋಗುವ ಸಂದರ್ಭದಲ್ಲಿ ಅದರ ಜತೆಯಲ್ಲಿಯೆ ಅಭಿಮಾನಿಗಳು ಒಳಗಡೆ ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಅವರನ್ನು ನಿಯಂತ್ರಿಸಲು ರೆಸಾರ್ಟ್ ಸಿಬ್ಬಂದಿ ಹರಸಾಹಸ ಪಟ್ಟರು.
ಮಧ್ಯಾಹ್ನದಿಂದ ಪುನೀತ್ ಅವರನ್ನು ನೋಡಲು ಬಾಗಿಲಿನಲ್ಲಿ ಕಾಯುತ್ತಿವೆ. ಆದರೆ, ಪುನೀತ್ ಅವರನ್ನು ನೋಡುವ ಭಾಗ್ಯ ಲಭಿಸಿಲ್ಲ. ಜೇಮ್ಸ್ ಚಿತ್ರದ ನಿರ್ಮಾಪಕರು ಕಿಶೋರ್ ಪತ್ತಿಕೊಂಡ ಅವರು ಸ್ಥಳೀಯರಾಗಿದ್ದು, ಪುನೀತ್ ನೋಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು.