ಕರ್ನಾಟಕ

karnataka

ETV Bharat / state

ವಾಯುಮಾಲಿನ್ಯ ‌ನಿಯಂತ್ರಣ ಮಂಡಳಿ ವಿರುದ್ಧ ಖಾಸಗಿ ಆಸ್ಪತ್ರೆಗಳು ಗರಂ - ವಾಯುಮಾಲಿನ್ಯ ‌ನಿಯಂತ್ರಣ ಮಂಡಳಿ ವಿರುದ್ಧ ಖಾಸಗಿ ಆಸ್ಪತ್ರೆಗಳು ಆಕ್ರೋಶ

ಮನಸೋ ಇಚ್ಛೆ ಮಾಲಿನ್ಯ ನಿಯಂತ್ರಣ ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ಆಸ್ಪತ್ರೆ ಆಸ್ತಿ, ಬಂಡವಾಳದ ಮೇಲೆ ಕನ್ಸೆಂಟ್ ಫೀಸ್‌ ವಸೂಲಿ ಮಾಡೋದು ಅವೈಜ್ಞಾನಿಕವಾಗಿದೆ ಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ತಿಳಿಸಿದ್ದಾರೆ..

Fana Sangh members
ಫನಾ ಸಂಘದ ಸದಸ್ಯರು

By

Published : Mar 25, 2022, 7:50 PM IST

ಬೆಂಗಳೂರು : ಕನ್ಸೆಂಟ್ ಫೀಸ್ ಹೆಚ್ಚಳ ಮಾಡಿರುವುದಕ್ಕೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ವಿರುದ್ಧ ಫನಾ ಸಂಘದ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ. ಪಿಸಿಬಿ ಮನಸ್ಸಿಗೆ ಬಂದ ತೀರ್ಮಾನ ಕೈಗೊಳ್ಳುತ್ತಿದ್ದು, ಆಸ್ಪತ್ರೆಗಳಿಗೆ ಬೇಕಾಬಿಟ್ಟಿ ಕನ್ಸೆಂಟ್ ಫೀಸ್ ಹೆಚ್ಚಿಸಿದೆ. 2021ರ ಕನ್ಸೆಂಟ್ ಫೀಸ್ ಪರಿಷ್ಕರಣೆ ಮಾಡಿರುವ ಮಾಲಿನ್ಯ ನಿಯಂತ್ರಣ ‌ಮಂಡಳಿ, ಶೇ. 33% ರಿಂದ ಶೇ. 900ರವರೆಗೂ ಕನ್ಸೆಂಟ್ ಫೀಸ್ ಹೆಚ್ಚಿಸಿದೆ.

ಕನ್ಸೆಂಟ್ ಫೀಸ್‌ ಹೆಚ್ಚಳ

ಅಂದಹಾಗೆ ಆಸ್ಪತ್ರೆಗಳಿಂದ ಎಷ್ಟು ತ್ಯಾಜ್ಯ ಹೊರಬರುತ್ತೆ, ಆಸ್ಪತ್ರೆಯಿಂದಾಗುವ ಮಾಲಿನ್ಯ ಯಾವ ಪ್ರಮಾಣದ್ದು, ಈ ಅಂಶಗಳನ್ನ ಇಟ್ಟುಕೊಂಡು ಇಲ್ಲಿಯವರೆಗೆ ಕನ್ಸೆಂಟ್ ಫೀಸ್ ಪಡೆಯಲಾಗ್ತಿತ್ತು. ಆದರೆ, ಈಗ ಆಸ್ಪತ್ರೆಯ ಒಟ್ಟಾರೆ ಆಸ್ತಿ, ಬಂಡವಾಳದ ಮೇಲೆ ಕನ್ಸೆಂಟ್ ಫೀಸ್ ವಸೂಲಿ ಮಾಡಲಾಗುತ್ತಿದೆ ಅಂತಾ ಆರೋಪಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಫನಾ ಅಧ್ಯಕ್ಷ ಡಾ. ಪ್ರಸನ್ನ, ಮನಸೋ ಇಚ್ಛೆ ಮಾಲಿನ್ಯ ನಿಯಂತ್ರಣ ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ಆಸ್ಪತ್ರೆ ಆಸ್ತಿ, ಬಂಡವಾಳದ ಮೇಲೆ ಕನ್ಸೆಂಟ್ ಫೀಸ್‌ ವಸೂಲಿ ಮಾಡೋದು ಅವೈಜ್ಞಾನಿಕವಾಗಿದೆ. ಉದಾಹರಣೆಗೆ ಆಸ್ಪತ್ರೆಯಲ್ಲಿ ಬಳಸುವ ಒಂದೊಂದು ಮಷಿನ್ 10 ಕೋಟಿ ಇದ್ದರೆ, ಅದರಿಂದ ಯಾವುದೇ ಮಾಲಿನ್ಯ ಇರುವುದಿಲ್ಲ. ಇದನ್ನೂ ಕೂಡ ಸೇರಿಸಿಕೊಂಡು ಕನ್ಸೆಂಟ್ ಫೀಸ್ ವಸೂಲಿ ಮಾಡಿದರೆ ಹೇಗೆ ?. ಎಷ್ಟು ಬೆಡ್ ಇರುತ್ತೆ. ಎಷ್ಟು ತ್ಯಾಜ್ಯ ಸೃಷ್ಟಿಯಾಗತ್ತೆ? ಅನ್ನೋದನ್ನ ನೋಡಬೇಕು.

ಅಲ್ಲದೇ, ಬಯೋ ಮೆಡಿಕಲ್ ವೇಸ್ಟ್ ಪ್ರತ್ಯೇಕವಾಗಿ ನಿರ್ವಹಣೆ ಮಾಡ್ತಿದ್ದೇವೆ. ಅದಕ್ಕೂ ಕೂಡ ಹಣ ಪಾವತಿ ಮಾಡ್ತಿದ್ದೇವೆ. ಅಲ್ಲದೆ, 5 ವರ್ಷದ ಫೀಸ್ ಅನ್ನು ಒಟ್ಟಿಗೆ ಕಟ್ಟುವಂತೆ ನೋಟಿಸ್ ಕೊಟ್ಟಿದ್ದಾರೆ. ನಾವು ಸಾಲ ಮಾಡಿ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಇದು ಅವೈಜ್ಞಾನಿಕವಾದ ತೀರ್ಮಾನವಾಗಿದೆ. ಆಸ್ಪತ್ರೆಗಳನ್ನ ನಡೆಸೋಕೆ ಆಗದಂತಾಗಿದೆ. ಈ ರೀತಿ ವಸೂಲಿ ಮಾಡಿದ್ರು. ನಾವು ಮತ್ತೆ ರೋಗಿಗಳ ಮೇಲೆ‌ ದರ ಹೆಚ್ಚಿಸುವ ಪರಿಸ್ಥಿತಿ ಎದುರಾಗುತ್ತೆ. ಹೀಗಾಗಿ, ಸಚಿವ ಆನಂದ್ ಸಿಂಗ್ ಅವರ ಗಮನಕ್ಕೆ ಈ ವಿಚಾರ ತಂದಿದ್ದೇವೆ. ಸಮಸ್ಯೆ ಬಗೆಹರಿಸಿ ಎಂದು ಕೇಳಿದ್ದೇವೆ ಅಂದರು.

ಬಂಡವಾಳ ಕನ್ಸೆಂಟ್ ಫೀಸ್ ಪರಿಷ್ಕೃತ ಫೀಸ್​ ಏರಿಕೆ

1000 ಕೋಟಿ 2 ಲಕ್ಷ 20 ಲಕ್ಷ 900%
500-1000 ಕೋಟಿ 1.50 ಲಕ್ಷ 10 ಲಕ್ಷ 567%
250-500 ಕೋಟಿ 1 ಲಕ್ಷ 5 ಲಕ್ಷ 400%
50-250 ಕೋಟಿ 75 ಸಾವಿರ 1 ಲಕ್ಷ 33%

ಓದಿ:ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಹಾಳು ಮಾಡಬೇಡಿ: ಹೆಚ್‌. ಡಿ. ಕುಮಾರಸ್ವಾಮಿ

For All Latest Updates

TAGGED:

ABOUT THE AUTHOR

...view details