ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ತೊರೆಯಲು ನಿರ್ಧರಿಸಿದ್ದ ಪತ್ನಿಯು ಕೋವಿಡ್ ಬಂದಿರುವುದಾಗಿ ಸುಳ್ಳು ಹೇಳಿ, ಆ್ಯಂಬುಲೆನ್ಸ್ ಮೂಲಕ ಡ್ರಾಪ್ ತೆಗೆದುಕೊಂಡು ಬಳಿಕ ಪರಾರಿ ಆಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಆ್ಯಂಬುಲೆನ್ಸ್ನಲ್ಲಿ ಹೋದ 'ಕೊರೊನಾ ಪೀಡಿತ' ಮಹಿಳೆ ನಂತರ ನಾಪತ್ತೆ...ಹಾಗಾದ್ರೆ ವಾಸ್ತವ ಏನು? - bangalore latest news
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವನ ಕುಟುಂಬದಲ್ಲಿ ಕಲಹ ಹಿನ್ನೆಲೆಯಲ್ಲಿ ಆತನ ಪತ್ನಿಯೇ ಕೊರೊನಾ ಸೋಂಕಿನ ನೆಪ ಹೇಳಿ ಎಸ್ಕೇಪ್ ಆಗಿರುವ ವಿಚಿತ್ರ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.
ಹೌದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಪತ್ನಿಯೇ ಸುಳ್ಳು ಹೇಳಿ ಎಸ್ಕೇಪ್ ಆಗಿದ್ದಾಳೆ. ಆಸ್ಪತ್ರೆಗೆ ಹೋಗಿ, ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ 'ಕೊರೊನಾ ಪೀಡಿತ' ಪತ್ನಿ ಕಾಣೆಯಾಗಿದ್ದಾಳೆ ಎಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಪತಿ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಕೌಟುಂಬಿಕ ಕಲಹದಿಂದ ಬೇಸತ್ತು ಆತನ ಪತ್ನಿ ಸ್ವಯಂ ಪ್ರೇರಿತವಾಗಿ ಮನೆ ತೊರೆದಿರುವುದು ತಿಳಿದಿದೆ. ಉತ್ತರ ಪ್ರದೇಶ ಮೂಲದ ರಿತೇಶ್ ಕುಮಾರ್ ಹಾಗೂ ಶುಚಿ ಕುಮಾರಿ (ದಂಪತಿಯ ಹೆಸರು ಬದಲಿಸಲಾಗಿದೆ) ನಡುವೆ ಆಗಾಗ ಜಗಳ ನಡೀತಿತ್ತು. ಇದೇ ಕಾರಣಕ್ಕೆ ಈ ರೀತಿಯಾಗಿ ತಪ್ಪಿಸಿಕೊಂಡಿರುವುದಾಗಿ ಪೊಲೀಸರಿಗೆ ಆಕೆಯ ಪತಿಯೇ ಮಾಹಿತಿ ನೀಡಿದ್ದಾರೆ.
ಸೆ.4ರಂದು ಶುಚಿ ಕುಮಾರಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಹೇಳಿ ಆಕೆಗೆ ಪರಿಚಯವಿರುವ ವ್ಯಕ್ತಿಯೋರ್ವ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದ. ಹೀಗಾಗಿ ಆ್ಯಂಬುಲೆನ್ಸ್ನಲ್ಲಿ ಬಂದ ಆಸ್ಪತ್ರೆ ಸಿಬ್ಬಂದಿ, ಶುಚಿ ಕುಮಾರಿಯನ್ನು ಕರೆದುಕೊಂಡು ಹೋಗಿದ್ದಾರೆ.ಆಸ್ಪತ್ರೆ ಬಳಿ ಇಳಿದ ಶುಚಿ ಕುಮಾರಿ, ಸ್ನೇಹಿತನ ಸಹಾಯದಿಂದ ಕ್ಯಾಬ್ ಬುಕ್ ಮಾಡಿಸಿಕೊಂಡು ನೇರವಾಗಿ ದೆಹಲಿಗೆ ತೆರಳಿದ್ದಾಳೆ ಎಂಬುದು ಪೊಲೀಸರ ತನಿಖೆ ಮೂಲಕ ತಿಳಿದು ಬಂದಿದೆ.