ಕರ್ನಾಟಕ

karnataka

ETV Bharat / state

ಕೋವಿಡ್​​ ಭಯ: ಚೆನ್ನೈನಿಂದ ಬಂದ ಮೃತದೇಹ ಸ್ವೀಕರಿಸಲು ಕುಟುಂಬಸ್ಥರ ನಕಾರ - bengluru latest corona updates

ಚೆನ್ನೈನಲ್ಲಿ ಮೃತಪಟ್ಟ ವ್ಯಕ್ತಿಯ ಶವ ಬೆಂಗಳೂರಿಗೆ ತರಲಾಗಿದ್ದು, ಕೊರೊನಾ ಭೀತಿ ಹಿನ್ನೆಲೆ ಮೃತನ ಕುಟುಂಬಸ್ಥರು ಶವ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ.

family-members-refused-to-receive-deadbody
ಮೃತದೇಹ ಸ್ವೀಕರಿಸಲು ಕುಟುಂಬಸ್ಥರ ನಕಾರ

By

Published : Jun 17, 2020, 10:21 AM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಕುಟುಂಬಸ್ಥರು ಕೊರೊನಾಗೆ ಭಯಪಟ್ಟು ವ್ಯಕ್ತಿಯ ಮೃತದೇಹ ಸ್ವೀಕರಿಸಲು ನಿರಾಕರಿಸಿದ್ದು, ರಾತ್ರಿಯಿಂದ ಆ್ಯಂಬುಲೆನ್ಸ್ ಚಾಲಕರು ವಾಹನದಲ್ಲಿ ಮೃತದೇಹ ಇಟ್ಟುಕೊಂಡು ಕಾಯುವಂತಾಗಿದೆ.

ಮೃತದೇಹ ಸ್ವೀಕರಿಸಲು ಕುಟುಂಬಸ್ಥರ ನಕಾರ
ಚೆನ್ನೈನಲ್ಲಿ ಎಸ್ಆರ್​ಎಸ್ ಲಾಜಿಸ್ಟಿಕ್​​ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ದತ್ತಾತ್ರೇಯ(53) ಎಂಬಾತ ಜೂನ್ 14 ರಂದು ಕೊಯಮಾಡು ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದ. ಹೀಗಾಗಿ ಪೊಲೀಸರು ಮೃತನ ವಾಸಸ್ಥಳ ಬೆಂಗಳೂರಾದ ಕಾರಣ ಮೃತದೇಹ ಇಲ್ಲಿಗೆ ರವಾನೆ ಮಾಡಿದ್ದಾರೆ.
ಮೃತದೇಹ ಸ್ವೀಕರಿಸಲು ಕುಟುಂಬಸ್ಥರ ನಕಾರ
ಆದರೆ, ಚಾಲಕ ದತ್ತಾತ್ರೇಯ ಅನುಮಾನಸ್ಪಾದ ಸಾವಿನ ಹಿನ್ನೆಲೆ ಮೃತದೇಹ ಸ್ವೀಕರಿಸಲು ಕುಟುಂಬದವರು ನಿರಾಕರಿಸಿದ್ದು , ತಡರಾತ್ರಿಯಿಂದಲೂ ನೈಸ್ ರಸ್ತೆ ಬದಿಯ ಅಂಬ್ಯುಲೆನ್ಸ್​​​​​ನಲ್ಲೇ ಮೃತ ದೇಹ ಇಟ್ಟಿದ್ದಾರೆ. ಇನ್ನು ಕುಟುಂಬಸ್ಥರನ್ನ ಕೇಳಿದರೆ ಕೊಯಮಾಡು ಬಳಿ ಕೊರೊನಾ ಕೇಸ್ ಅತಿ ಹೆಚ್ಚಾಗಿದೆ.
ಹೀಗಾಗಿ ಮೃತನ ಕೋವಿಡ್ ಟೆಸ್ಟ್ ರಿಪೋರ್ಟ್ ನೀಡದೇ ನಮಗೆ ಶರೀರ ಶವ ತೆಗೆದುಕೊಳ್ಳಲು ಭಯವಾಗುತ್ತೆ ಎಂದಿದ್ದಾರೆ. ಇನ್ನು ವಿಚಾರ ತಿಳಿದು ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ಬಂದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ನಿರ್ಧಾರ ಮಾಡಿದ್ದಾರೆ.

ABOUT THE AUTHOR

...view details