ಕರ್ನಾಟಕ

karnataka

ETV Bharat / state

ಅಂತ್ಯ ಸಂಸ್ಕಾರ ಲೈವ್​​... ಕುಟುಂಬಸ್ಥರ ಕೊರಗು ನೀಗಿಸುತ್ತಿದ್ದಾರೆ ಇವರು! - ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ಲೈವ್​,

ಕೋವಿಡ್​ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಮತ್ತು ದೂರದ ಬಂಧುಗಳಿಗೆ ಕೆಲ ಮಾನವತಾವಾದಿಗಳು ಲೈವ್ ಸ್ಟ್ರೀಮ್ ಮೂಲಕ ಸೋಂಕಿತರ ಅಂತ್ಯ ಸಂಸ್ಕಾರ ತೋರಿಸುತ್ತಿದ್ದಾರೆ.

watch Covid cremation in live, Family members now watch Covid cremation in live, Covid cremation live, Covid cremation live news, ಲೈವ್ ಸ್ಟ್ರೀಮ್ ಮೂಲಕ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ವೀಕ್ಷಣೆ, ಕುಟುಂಬಸ್ಥರು ಲೈವ್ ಸ್ಟ್ರೀಮ್ ಮೂಲಕ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ವೀಕ್ಷಣೆ, ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ಲೈವ್​, ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ಲೈವ್​ ಸುದ್ದಿ,
ಲೈವ್ ಸ್ಟ್ರೀಮ್ ಮೂಲಕ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ವೀಕ್ಷಣೆ

By

Published : May 20, 2021, 9:48 AM IST

ಬೆಂಗಳೂರು: ಕುಟುಂಬಸ್ಥರು ಇಲ್ಲದೇ ಕೋವಿಡ್​​ನಿಂದ​ ಮೃತಪಟ್ಟವರ ಅದೆ್ಟೋ ಅಂತ್ಯ ಸಂಸ್ಕಾರಗಳು ನಡೆದಿವೆ. ಪೋಷಕರು ಮತ್ತು ಸಂಬಂಧಿಗಳು ಇದನ್ನೇ ನೆನೆದು ದುಃಖಕ್ಕೆ ಗುರಿಯಾಗುತ್ತಾರೆ. ಆದ್ರೆ ಕೆಲ ಮಾನವತಾವಾದಿಗಳು ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಲೈವ್​ ಸ್ಟ್ರೀಮ್​ ಮೂಲಕ ಆಯಾ ಕುಟುಂಸ್ಥರಿಗೆ ತೋರಿಸುತ್ತಿದ್ದಾರೆ.

ಕೋವಿಡ್ ಮಹಾಮಾರಿ ತೀರಾ ಹತ್ತಿರದ ಬಂಧುಗಳು, ರಕ್ತಸಂಬಂಧಿಗಳನ್ನು ದೂರ ಮಾಡಿ ಒಂಟಿ ಮಾಡಿಸುತ್ತದೆ. ಅಷ್ಟೇ ಅಲ್ಲ ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗದಂತೆ ಹಾಗೂ ಕೊನೆಯ ಬಾರಿ ಮುಖ ನೋಡದ ಹಾಗೆಯೂ ಈ ಕೊರೊನಾ ಮಾಡಿದೆ. ಹೀಗಾಗಿ ಕಡೆಯ ಬಾರಿಯ ಅಂತ್ಯ ಸಂಸ್ಕಾರವನ್ನಾದರೂ ನೋಡುವ ಅವಕಾಶವನ್ನು ತಂತ್ರಜ್ಞಾನದ ಮೂಲಕ ಸಾಧ್ಯ ಮಾಡಲಾಗ್ತಿದೆ.

37 ವರ್ಷದ ವ್ಯಕ್ತಿಯೊಬ್ಬರು ಕೋವಿಡ್​ನಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದರು. ಇವರನ್ನು ಇಂಡಿಯನ್ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅವರ ಜೊತೆಗಿದ್ದ ಗೆಳೆಯರು ಅಂತ್ಯ ಸಂಸ್ಕಾರವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಕ್ವಾರಂಟೈನ್​ನಲ್ಲಿದ್ದ ಅವರ ಕುಟುಂಸ್ಥರಿಗೆ ಹಾಗೂ ಮಲೇಶಿಯಾದಲ್ಲಿದ್ದ ಸ್ನೇಹಿತರಿಗೆ ಫೇಸ್​ಬುಕ್ ಲೈವ್​ ಮೂಲಕ ತೋರಿಸಿದರು. ಈ ರೀತಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಲಾಗದ ಸ್ಥಿತಿ ಬಂದಾಗ ಇದೇ ದಾರಿ ಅನುಸರಿಸುತ್ತಿದ್ದಾರೆ.

ಕಮ್ಮನಹಳ್ಳಿ ಸ್ಟುಡಿಯೋದ ವೃತ್ತಿಪರ ಕ್ಯಾಮರಾ ಮೆನ್​ಗಳಿಗೆ ಅಂತ್ಯ ಸಂಸ್ಕಾರದ ಲೈವ್ ಸ್ಟ್ರೀಮ್ ಮಾಡಲು ಬೇಡಿಕೆ ಬರುತ್ತಿದೆ. ಬೇಡಿಕೆ ಹಿನ್ನೆಲೆ ಪಿಪಿಇ ಕಿಟ್ ಧರಿಸಿ ಸಿಬ್ಬಂದಿ ಸ್ಮಶಾನಕ್ಕೆ ಹೋಗಿ ಅಂತ್ಯ ಸಂಸ್ಕಾರವನ್ನು ಲೈವ್ ಮೂಲಕ ಆಯಾ ಕುಟುಂಬಸ್ಥರಿಗೆ ತೋರಿಸಲಾಗುತ್ತಿದೆ ಎಂದು ಸ್ಟುಡಿಯೋ ಮಾಲೀಕರು ತಿಳಿಸಿದ್ದಾರೆ.

ಕೆಲವೆಡೆ ಆಂಬ್ಯುಲೆನ್ಸ್​ ಸಿಬ್ಬಂದಿ, ಅಂತ್ಯ ಸಂಸ್ಕಾರ ನಡೆಸುತ್ತಿರುವ ಸ್ವಯಂಸೇವಕರ ತಂಡದವರೇ ಲೈವ್ ಸ್ಟ್ರೀಮ್ ಮೂಲಕ ಸಂಬಂಧಿಕರಿಗೆ ತೋರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದರಿಂದ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿಲ್ಲ ಎಂಬ ಕುಟುಂಬಸ್ಥರ ಕೊರಗು ನೀಗಿಸಿದಂತಾಗುತ್ತದೆ.

ABOUT THE AUTHOR

...view details