ಕರ್ನಾಟಕ

karnataka

ETV Bharat / state

ಪಾತಕ‌ ಲೋಕದಲ್ಲಿ‌ ಘರ್ಜಿಸಿದ್ದ ಡಾನ್​ ರವಿ: ಖಾಕಿ ಕೋಟೆಯಲ್ಲಿ‌ ನಡೆಸುತ್ತಿದ್ದಾನೆ ಒಂಟಿ ಜೀವನ..! - don ravi pujar news

ಭೂಗತ ಪಾತಕಿ ರವಿ ಪೂಜಾರಿ ಸದ್ಯ ಪೊಲೀಸರ ಕಸ್ಟಡಿಯಲ್ಲಿದ್ದು, ಈತನನ್ನು ನೋಡಲು ಪತ್ನಿ, ತಾಯಿ, ಸಹೋದರಿ ಹಾಗೂ ಸಹೋದರ ಯಾರೂ ಬಂದಿಲ್ಲ ಎನ್ನಲಾಗಿದೆ.

Family members did't  Meet Don Ravi Pujar
ಪಾತಕ‌ ಲೋಕದಲ್ಲಿ‌ ಘರ್ಜಿಸಿದ್ದ ಡಾನ್​ ರವಿ

By

Published : Mar 3, 2020, 6:52 PM IST

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸದ್ಯ ಪೊಲೀಸರ ಕಸ್ಟಡಿಯಲ್ಲಿದ್ದು, ಈತನನ್ನು ನೋಡಲು ಪತ್ನಿ, ತಾಯಿ, ಸಹೋದರಿ ಹಾಗೂ ಸಹೋದರ ಯಾರೂ ಬಂದಿಲ್ಲ ಎನ್ನಲಾಗಿದೆ.

ಕರ್ನಾಟಕ ಪೊಲೀಸರು ಆರೋಪಿ ರವಿ ಪೂಜಾರಿ ಬಂಧಿಸಿ ವಾರಗಳೇ ಕಳೆದಿದೆ ಆದರೆ ವಕೀಲರನ್ನು ಹೊರತುಪಡಿಸಿ, ಈತನ್ನು ಭೇಟಿಯಾಗಲು ಮನೆಯ ಯಾವೊಬ್ಬ ಸದಸ್ಯನಾಗಲಿ ಆತನ ಸಹಚರರಾಗಲಿ ಬಂದಿಲ್ಲ ಎನ್ನವ ವಿಚಾರ ಹೊರಬಿದ್ದಿದೆ.

ಮತ್ತೊಂದೆಡೆ ಗುಪ್ತಚಾರ ಇಲಾಖೆಯ ಮಾಹಿತಿ ಪ್ರಕಾರ ರವಿ ಪೂಜಾರಿಯ ಕಸ್ಟಡಿ ಇದೇ 7 ರಂದು ಅಂತ್ಯವಾಗಲಿದ್ದು, ನ್ಯಾಯಾಲಯಕ್ಕೆ ಕರೆತರುವ ವೇಳೆ ಕೆಲ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ.

ದಾವೂದ್ ಇಬ್ರಾಹಿಂ ಸಹಚರರಿಗೆ ರವಿ ಪೂಜಾರಿ ಈಗಾಗಲೇ ಹೆದರಿದ್ದಾನೆ. ಹಾಗಾಗಿ ಆತನ ಸಹಚರರು ಹಲ್ಲೆ ನಡೆಸುವ ಸಾಧ್ಯತೆ ಹೆಚ್ಚಿದೆ ಎನ್ನುವ ವಿಚಾರ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಸದ್ಯ ಅಲರ್ಟ್‌ ಆಗಿದ್ದಾರೆ.

ABOUT THE AUTHOR

...view details