ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ಕೊರೊನಾ ಸೋಂಕು ತಗಲುವ ಭೀತಿಯಿಂದ, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಕೈದಿಗಳಿದ್ದು, ಅದರಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆಂಬ ಸುದ್ದಿ ಹರಡಿತ್ತು. ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಯಾರಿಗೂ ಕೊರೊನಾ ಸೋಂಕು ಹರಡಿಲ್ಲ ಎಂದು ಜೈಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಅಂದ್ಕೊಂಡವರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆಂಬ ವದಂತಿ ಹರಡಿತ್ತು. ಆದರೆ ಇದು ಸುಳ್ಳು ಸುದ್ದಿಯಾಗಿದ್ದು, ಯಾರಿಗೂ ಕೊರೊನಾ ಸೋಂಕು ಹರಡಿಲ್ಲಎಂದು ಜೈಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಸ್ವಲ್ಪ ಅನುಮಾನ ಇದ್ರೂ ಕೈದಿಗಳನ್ನು ಚಿಕಿತ್ಸೆಗೆ ಒಳಪಡಿಸಿ, ಬೇರೆ ಕೊಠಡಿಗಳಲ್ಲಿ ಇಡಲಾಗುತ್ತದೆ. ಸದ್ಯ ಜೈಲಿನಲ್ಲಿರುವ ಕೈದಿಗಳು ಬಹಳಷ್ಟು ಮುಂಜಾಗ್ರತ ಕ್ರಮದಲ್ಲಿ ಇರಬೇಕಾದುದು ಅನಿವಾರ್ಯವಾಗಿದೆ. ಯಾಕಂದ್ರೆ ಜೈಲಿನಲ್ಲಿ ಬೇರೆ ಬೇರೆ ಸೋಂಕು ಇರುವ ವ್ಯಕ್ತಿಗಳು ಕೂಡ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಏಡ್ಸ್ ಸೇರಿದಂತೆ ಬೇರೆ ಬೇರೆ ಕಾಯಿಲೆಯಿರುವ ರೋಗಿಗಳ ಮೇಲೆ ಕಣ್ಣಿಟ್ಟಿದ್ದು, ಪ್ರತಿದಿನ ಆರೋಗ್ಯದ ತಪಾಸಣೆ ನಡೆಸಲಾಗ್ತಿದೆ. ಹಾಗೆ ಪರಪ್ಪನ ಅಗ್ರಹಾರದಲ್ಲಿ ಕೆಲ ಕೈದಿಗಳು ಕೂಡ ಮಾಸ್ಕ್ ತಯಾರಿ ಮಾಡ್ತಿದ್ದು, ಪ್ರತಿಯೊಬ್ಬರು ಜೈಲಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡಬೇಕು. ಹಾಗೂ ಹತ್ತಿರ ನಿಂತು ಮಾತನಾಡಬಾರದು ಎಂಬ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜೈಲಾಧಿಕಾರಿ ತಿಳಿಸಿದ್ದಾರೆ.