ಕರ್ನಾಟಕ

karnataka

ETV Bharat / state

ವರ್ಗಾವಣೆ ತಡೆಯಲು ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ... ಅಬ್ಬಬ್ಬಾ ಈ ಆಫೀಸರ್​ ಏನ್​ ಕಿಲಾಡಿ ನೋಡಿ

ವರ್ಗಾವಣೆ ಆದೇಶದಲ್ಲಿ ಮಾರ್ಪಾಡು ಮಾಡಿಸಲು ಕೆಪಿಟಿಸಿಎಲ್ ಅಧಿಕಾರಿಯೊಬ್ಬ ಸಿಎಂ ಕಚೇರಿ ಹೇಸರಿನಲ್ಲಿ ಸುಳ್ಳು ಕರೆ ಮಾಡಿ ತಗಲಾಕಿಕೊಂಡಿದ್ದಾನೆ.

ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ

By

Published : Nov 9, 2019, 6:52 PM IST

ಬೆಂಗಳೂರು: ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಕೆಪಿಟಿಸಿಎಲ್ ಉದ್ಯೋಗಿಯೊಬ್ಬ ಸಿಎಂ ಕಚೇರಿ ಹೆಸರಲ್ಲಿ ‌ನಕಲಿ ಕರೆ ಮಾಡಿಸಿದ್ದಾನೆ.

ಕೆಪಿಟಿಸಿಎಲ್​ನ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಲ್.ನರಸಿಹಂಮೂರ್ತಿ‌ ಎಂಬ ಅಧಿಕಾರಿ ಈ ರೀತಿ ಸುಳ್ಳು ಕರೆ ಮಾಡಿ ತಮ್ಮ ವರ್ಗಾವಣೆ ಆದೇಶವನ್ನು ಮಾರ್ಪಾಡು ಮಾಡಲು ಯತ್ನಿಸಿದ್ದಾರೆ.

ವರ್ಗಾವಣೆ ಆದೇಶ

ಅಕ್ಟೋಬರ್ 23 ರಂದು ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಆದರೆ ವರ್ಗಾವಣೆಗೆ ಒಲ್ಲದ ನರಸಿಂಹಮೂರ್ತಿ ಈ ಹಿಂದಿನ ಜಾಗದಲ್ಲಿಯೇ ಮುಂದುವರೆಸುವ‌ ನಿಟ್ಟಿನಲ್ಲಿ ಸುಳ್ಳು‌ ಕರೆ ಮಾಡಿದ್ದಾರೆ.

ಕೆಂಗೇರಿಯ ಬೆಸ್ಕಾಂ ಕಾರ್ಯಪಾಲನ‌ ವಿಭಾಗದಲ್ಲಿ‌ ಮುಂದುವರಿಯುವ ಸಲುವಾಗಿ ಮಾರ್ಪಾಡು ಆದೇಶ ಪಡೆಯಲು ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ ಮಾಡಿಸಿದ್ದಾರೆ. ಈ ಸುಳ್ಳು ಕರೆಯ ವಿಚಾರ ಗೊತ್ತಾಗಿ ಕೆಪಿಟಿಸಿಎಲ್ ನಿರ್ದೇಶಕರು ವಾರ್ಗಾವಣೆ ಮಾಡಿರುವ ಕೆಪಿಟಿಸಿಎಲ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ನರಸಿಂಹಮೂರ್ತಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details