ಬೆಂಗಳೂರು: ನಕಲಿ ಸ್ಯಾನಿಟೈಸರ್ ಬಾಟಲ್ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಾಸಿಪಾಳ್ಯ ನಿವಾಸಿ ಹ್ಯಾರಿಸ್ ಎಂಬುವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಹ್ಯಾರಿಸ್ ಎಂಬುವರಿಗೆ ಸ್ಯಾನಿಟೈಸರ್ ಮಾರಾಟ ಮಾಡಲು ಇಬ್ಬರು ಬಂದಿದ್ದರು. ಈ ಸ್ಯಾನಿಟೈಸರ್ ಕಂಡು ಅನುಮಾನಗೊಂಡ ಅವರು, ಸುಧಾಮನಗರ ಮಾಜಿ ಕಾರ್ಪೊರೇಟರ್ ಆರ್.ವಿ ಯುವರಾಜ್ ಗೆ ಮಾಹಿತಿ ನೀಡಿದ್ದಾರೆ. ಇದರಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಯುವಕರು ನಕಲಿ ಸ್ಯಾನಿಟೈಸರ್ ಮಾರಾಟ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ನಕಲಿ ಸ್ಯಾನಿಟೈಸರ್ ಮಾರಾಟಗಾರರು ಪೊಲೀಸ್ ವಶಕ್ಕೆ ಐದು ಲೀಟರ್ ಸ್ಯಾನಿಟೈಸರ್ ಬಾಟಲಿಗೆ 10 ಸಾವಿರ ಹಣ ಫಿಕ್ಸ್ ಮಾಡಿ ಸಾರ್ವಜನಿಕರಿಂದ ಗೂಗಲ್ ಪೇ ಹಾಗೂ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ನಂತರ ಸ್ಯಾನಿಟೈಸರ್ ಡೆಲಿವರಿ ಮಾಡುತ್ತಿದ್ದರು. ಈ ಹಿಂದೆ ಸಾಹಿಲ್ ಎಂಬುವರಿಗೆ ಸ್ಯಾನಿಟೈಸರ್ ಬಾಟಲಿಯಲ್ಲಿ ಮೌತ್ ವಾಶ್ ಇಟ್ಟು ಮಾರಾಟ ಮಾಡಿದ್ದರು. ಮೈಸೂರು ರಸ್ತೆಯ ಫ್ಯಾಕ್ಟರಿಯಿಂದ ತಂದು ನಕಲಿ ಸ್ಯಾನಿಟೈಸರ್ ಮಾರಾಟ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸದ್ಯ ಇಬ್ಬರು ಯುವಕರ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕೃತ್ಯದ ಹಿಂದೆ ಹಲವಾರು ಮಂದಿ ಭಾಗಿಯಾಗಿರುವ ಬಗ್ಗೆ ಸಿಬ್ಬಂದಿ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಓದಿ:ಅನಗತ್ಯವಾಗಿ ರಸ್ತೆಗಿಳಿದರೆ ಲಾಠಿ ರುಚಿ ತೋರಿಸ್ತೇವೆ: ಡಿಸಿಪಿ ಶರಣಪ್ಪ ಎಚ್ಚರಿಕೆ