ಬೆಂಗಳೂರು:ಪೊಲೀಸರೆಂದು ನಂಬಿಸಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು, ಆಗ್ನೇಯ ವಿಭಾಗದ ಡಿಸಿಪಿ ನೇತೃತ್ವದ ತಂಡ ಬಂಧಿಸಿದ್ದಾರೆ.
ಪೊಲೀಸರೆಂದು ಬೆದರಿಸಿ ಕಿಡ್ನಾಪ್ ಮಾಡುತ್ತಿದ್ದ ನಕಲಿ ಪೊಲೀಸರ ಬಂಧನ - ರಾತ್ರಿ ತೆರಳಿ ಕಾರ್ಯಚರಣೆ
ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ವಿಶೇಷ ತಂಡ ರಚನೆ ಮಾಡಿ, ಹಣ ನೀಡುವವರ ಸೋಗಿನಲ್ಲಿ ರಾತ್ರೋರಾತ್ರಿ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮಾರಕಾಸ್ತ್ರ, ದ್ವಿಚಕ್ರವಾಹನ, ಚಾಕು, ಮೊಬೈಲ್ ಜಪ್ತಿ ಮಾಡಿ ಆರೋಪಿಗಳ ಹಿನ್ನೆಲೆ ಕುರಿತು ತನಿಖೆ ಮುಂದುವರೆಸಿದ್ದಾರೆ.
ಮೊಹಮ್ಮದ್ ಖಲೀಲ್, ಮುಬಾರಕ್ ಅಲಿಯಾಸ್ ಇಮ್ರಾನ್ ಹಾಗೂ ಸಾಧಿಕ್ ಬಂಧಿತ ಆರೋಪಿಗಳು. ಬೊಮ್ಮನಹಳ್ಳಿ ಪೊಲೀಸ್ ಠಾಣೆ ಹಾಗೂ ಮೈಕೋ ಲೇಔಟ್ ಬಳಿಯ ಮೂವರು ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿದ್ದ ಆರೋಪಿಗಳು, ಪೊಲೀಸರಂತೆ ವರ್ತಿಸಿ ಜಹೀರ್ ಉಲ್ಲಾ ಎಂಬಾತನನ್ನು ಭೇಟಿಯಾಗಿ ಬೆದರಿಸಿ ಕಿಡ್ನಾಪ್ ಮಾಡಿದ್ದರು. ನಂತರ ಜಹೀರ್ ಉಲ್ಲಾ ಸ್ನೇಹಿತರಾದ ಕಾಬುಲ್ ಹಾಗೂ ಮೆಹಬೂಬ್ ಎಂಬವರನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಮಾರಕಾಸ್ತ್ರಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಟ್ಡಿದ್ದಾರೆ. ಮೂವರ ಬಳಿ ಯಾವುದೇ ದುಡ್ಡು ಇಲ್ಲದ ಕಾರಣ ಕಿಡ್ನಾಪ್ ಆದವರ ಮನೆಗೆ ಕರೆ ಮಾಡಿ 50,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ತಕ್ಷಣ ಮನೆಯವರು ಆಗ್ನೇಯ ವಿಭಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ವಿಶೇಷ ತಂಡ ರಚನೆ ಮಾಡಿ, ಹಣ ನೀಡುವವರ ಸೋಗಿನಲ್ಲಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮಾರಕಾಸ್ತ್ರ, ದ್ವಿಚಕ್ರವಾಹನ, ಚಾಕು, ಮೊಬೈಲ್ ಜಪ್ತಿ ಮಾಡಿ ಆರೋಪಿಗಳ ಹಿನ್ನೆಲೆ ಕುರಿತು ತನಿಖೆ ಮುಂದುವರೆಸಿದ್ದಾರೆ.