ಕರ್ನಾಟಕ

karnataka

ETV Bharat / state

ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ: ಮತ್ತೋರ್ವ ಕಿಂಗ್ ಪಿನ್ ಅರೆಸ್ಟ್ - ಕಿಂಗ್ ಪಿನ್ ಅರೆಸ್ಟ್

ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ. ಗುಜರಾತ್ ಮೂಲದ‌ ಪ್ರಮುಖ ಆರೋಪಿ ಬಂಧನ.

Fake Passport Scam King Pin Arrest
ಶಿಬು ಬಂಧಿತ ಆರೋಪಿ

By

Published : Feb 1, 2023, 1:53 PM IST

ಬೆಂಗಳೂರು:ನಕಲಿ‌ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ವಿದೇಶಿಯರಿಗೆ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ದ ಜಾಲವನ್ನ ಪತ್ತೆ ಹಚ್ಚಿದ್ದ ಪೊಲಿಸರು 9 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ಸಿಕ್ಕಿದ ಸುಳಿವಿನ ಮೇರೆಗೆ ಗುಜರಾತ್ ಮೂಲದ‌ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಗುಜರಾತ್ ಮೂಲದ ಶಿಬು ಬಂಧಿತ ಆರೋಪಿ.

ವಾಮಮಾರ್ಗದಲ್ಲಿ ಪಾಸ್ ಪೋರ್ಟ್: ಆರೋಪಿ ಹಲವು ವರ್ಷಗಳಿಂದ ಶೀಲಂಕಾ‌ ಸೇರಿ‌ ಕೆಲ ದೇಶಗಳ ಏಜೆಂಟ್​ಗಳೊಂದಿಗೆ ಸಂಪರ್ಕ ಸಾಧಿಸಿ ವಿದೇಶಿಯರಿಗೆ ವಾಮಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸುತ್ತಿದ್ದ. ಫ್ರಾನ್ಸ್​​ನಲ್ಲಿ ಕೆಲ ಕಾಲ ಶೆಫ್ ಆಗಿ ಕೆಲಸ ಮಾಡುವಾಗ ಶ್ರೀಲಂಕಾ ಮೂಲದ ಮಧ್ಯವರ್ತಿಯನ್ನು ಪರಿಚಯಸಿಕೊಂಡಿದ್ದನಂತೆ. ಅಲ್ಲಿನ ಪ್ರಜೆಗಳನ್ನ ಸಂಪರ್ಕಿಸಿ ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುವ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಪ್ರಕರಣದಲ್ಲಿ ಬಂಧಿನಾಗಿರುವ ಎ1 ಆರೋಪಿ ಅಮಿನ್ ಶೇಟ್ ಎಂಬಾತ ನೀಡಿದ ಸುಳಿವಿನ ಮೇರೆಗೆ ಆರೋಪಿ ಶಿಬುನನ್ನು ಬಂಧಿಸಲಾಗಿದೆ. ಶಿಬು ವಿಚಾರಣೆ ಇನ್ನೋರ್ವ ಆರೋಪಿ ಬಗ್ಗೆ ಸುಳಿವು ಸಿಕ್ಕಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈವರೆಗೆ 9 ಮಂದಿ ಬಂಧನ:ಆಧಾರ್ ಕಾರ್ಡ್, ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (ಟಿಸಿ) ಸೇರಿದಂತೆ ಇನ್ನಿತರ ದಾಖಲಾತಿಗಳನ್ನ ನಕಲಿಯಾಗಿ ಸೃಷ್ಟಿಸಿ, ಅಪರಾಧ ಹಿನ್ನೆಲೆ ಇರುವ ಆರೋಪಿಗಳು ಹಾಗೂ ವಿದೇಶಿಯರಿಗೆ ಅಕ್ರಮವಾಗಿ ಪಾಸ್ ಪೋರ್ಟ್ ಮಾಡುತ್ತಿದ್ದ ಐವರು ವಿದೇಶಿಯರು ಸೇರಿ 9 ಮಂದಿ ಆರೋಪಿಗಳನ್ನ ಬಂಧಿಸಲಾಗಿತ್ತು. ಅಕ್ರಮ ಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ, ಶ್ರೀಲಂಕಾ ಪ್ರಜೆಗಳಾದ ಸೆಲ್ವಿ, ರವಿಕುಮಾರ್, ಮಣಿವೇಲು, ಶೀಜು, ವಿಶಾಲ್ ನಾರಾಯಣ್, ಅಮೀನ್ ಸೇಟ್ ಬಂಧಿತ ಆರೋಪಿಗಳು.

ಪಾಸ್ ಪೋರ್ಟ್, ಚಾಲನ ಪರವಾನಗಿ ಸೇರಿದಂತೆ ನಕಲಿ ದಾಖಲಾತಿ ಇರುವವರಿಗೆ ಗಾಳ ಹಾಕುತ್ತಿದ್ದ ಆರೋಪಿಗಳು‌ ಡ್ಯಾಕುಮೆಂಟ್ಸ್ ಇಲ್ಲದಿದ್ದರೂ ಪಾಸ್ ಪೋರ್ಟ್ ಮಾಡಿಸಿಕೊಡುವುದಾಗಿ ಹೇಳಿ ಬೆಂಗಳೂರಿನಲ್ಲಿ ಆಧಾರ್ ಕಾರ್ಡ್, ಅಂಕಪಟ್ಟಿ, ವಿಳಾಸಪತ್ರ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಫೋರ್ಜರಿ ಮಾಡುತ್ತಿದ್ದರು. ಅಲ್ಲದೇ ಒಂದು ಪಾಸ್ ಪೋರ್ಟ್ ಗೆ 45 ಸಾವಿರ ರೂಪಾಯಿ ಪಡೆದು ಪಾಸ್​​​ಪೋರ್ಟ್ ಕೇಂದ್ರಕ್ಕೆ ಹೋಗಿ ದಾಖಲಾತಿಗಳನ್ನ ಅಸಲಿ ಎಂಬಂತೆ ಬಿಂಬಿಸುತ್ತಿದ್ದರು.

ಇಬ್ಬರು ಪೊಲೀಸರು ಅಮಾನತು: ಪೊಲೀಸ್​​ ವೇರಿಫಿಕೇಷನ್ ವೇಳೆಯಲ್ಲಿಯೂ ನಕಲಿ ರೆಂಟಲ್ ಅಗ್ರಿಮೆಂಟ್ ಸೃಷ್ಟಿಸಿ, ಅಪರಿಚಿತರ ಮನೆಯನ್ನೇ ತಮ್ಮ ಮನೆಯೆಂದು ಸುಳ್ಳು ಹೇಳಿ ಯಾಮಾರಿಸುತ್ತಿದ್ದರು. ಸೂಕ್ತ ತಪಾಸಣೆ ನಡೆಸದೇ ನಿರ್ಲಕ್ಷ್ಯ ತೋರಿದ್ದ ಇಬ್ಬರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಅಮಾನತು ಮಾಡಿದ್ದರು.

ವ್ಯವಸ್ಥಿತ ಜಾಲದಿಂದ ಶ್ರೀಲಂಕಾ ಪ್ರಜೆಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಬೆಂಗಳೂರಿಗೆ ಬಂದರೆ ಸುಲಭವಾಗಿ ಪಾಸ್ ಪೋರ್ಟ್ ಮಾಡಿಸಿಕೊಡುವುದಾಗಿ ಹೇಳಿ ಕರೆಯಿಸಿಕೊಂಡಿದ್ದರು. ಶ್ರೀಲಂಕಾದಲ್ಲಿನ ರಾಜಕೀಯ ಅಸ್ಥಿರತೆ ಹಿನ್ನೆಲೆ ವಾಮಾಮಾರ್ಗದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಒಮ್ಮೆ ಶ್ರೀಲಂಕಾಕ್ಕೆ ಹೋಗಿ ನಂತರ ಸೌದಿ ಅರೆಬೀಯಾಗೆ ಹೋಗಲು ಬಂಧಿತ ವಿದೇಶಿ ಪ್ರಜೆಗಳು ಸಿದ್ಧತೆ ನಡೆಸಿಕೊಂಡಿದ್ದರು ಎನ್ನಲಾಗಿದೆ.

ಕ್ರಿಮಿನಲ್​ಗಳಿಗೂ ವೀಸಾ:ಕೇವಲ ವಿದೇಶಿಯರಿಗೆ ಮಾತ್ರವಲ್ಲದೆ ಅಪರಾಧ ಹಿನ್ನೆಲೆ ಇರುವ ಕುಖ್ಯಾತ ಕ್ರಿಮಿನಲ್​ಗಳಿಗೂ ವೀಸಾ ಮಾಡಿಸಿಕೊಳ್ಳುತ್ತಿದ್ದ ಆರೋಪಿಗಳು ಚಿಕ್ಕಮಗಳೂರು ಮೂಲದ 36 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನಿಗೂ ಪಾಸ್ ಪೋರ್ಟ್ ಮಾಡಿಸಿದ್ದರು. ಜತೆಗೆ ಕೊಲೆ, ದರೋಡೆ ಪ್ರಕರಣದ ಮೂವರು ಆರೋಪಿಗಳು ಸಹ ವಾಮಾಮಾರ್ಗವಾಗಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು. ಈವರೆಗೆ 50ಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಮಾಡಿಸಿಕೊಂಡಿರುವ ಮಾಹಿತಿ ದೊರೆತಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ನಕಲಿ ಪಾಸ್​ಪೋರ್ಟ್​ ಕೇಸ್: ಕೆಲವೇ ದಿನಗಳಲ್ಲಿ ರೊನಾಲ್ಡಿನೋ ರಿಲೀಸ್

ABOUT THE AUTHOR

...view details