ಬೆಂಗಳೂರು: ಆರ್ಬಿಐಗೆ ಹಣ ರಿಮಿಟ್ ಮಾಡುವ ಸಂದರ್ಭದಲ್ಲಿ ಮೂರು ಸಾವಿರ ರೂ ಮೌಲ್ಯದ ನಕಲಿ ನೋಟುಗಳ ಪತ್ತೆಯಾದ ಘಟನೆ ವರದಿಯಾಗಿದೆ. ಕಳೆದ ಎರಡು ದಿನದ ಅಂತರದಲ್ಲಿ 100 ರೂ ಮುಖಬೆಲೆಯ ಒಟ್ಟು 30 ನಕಲಿ ನೋಟುಗಳು ಪತ್ತೆಯಾಗಿದ್ದು, ನೃಪತುಂಗ ರಸ್ತೆಯಲ್ಲಿರುವ ಆರ್ಬಿಐ ಮ್ಯಾನೇಜರ್ ನೀಡಿರುವ ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ.
ಮೇ 2ರಿಂದ ಮೇ 31ರ ಅವಧಿಯಲ್ಲಿ ಆರ್ಬಿಐಗೆ ಬಂದ ಕರೆನ್ಸಿ ಚೆಸ್ಟ್ನಲ್ಲಿ ಮಣಿಪಾಲದ ಕೆನರಾ ಬ್ಯಾಂಕ್‌ನಿಂದ ಹದಿನೈದು, ಮಲ್ಲೇಶ್ವರಂನ ಬ್ಯಾಂಕ್ ಆಫ್ ಬರೋಡಾ ಬ್ರಾಂಚ್ನಿಂದ ಐದು, ಹುಬ್ಬಳ್ಳಿಯ ಮದಿಮಾನ ಕಾಂಪ್ಲೆಕ್ಸ್ ಬ್ರಾಂಚ್ನಿಂದ ಐದು, ಉಡುಪಿಯ ರಾಜಾಜಿಮಾರ್ಗ ಯುಬಿಐ ಬ್ರಾಂಚ್ನಿಂದ ಐದು ಸೇರಿದಂತೆ 100 ರೂ ಮುಖಬೆಲೆಯ ಒಟ್ಟು ಮೂವತ್ತು ನೋಟುಗಳು ಬಂದಿವೆ ಎಂದು ಆರ್.ಬಿ.ಐ ಮ್ಯಾನೇಜರ್ ದೂರು ನೀಡಿದ್ದಾರೆ.
ಕಳೆದ ತಿಂಗಳು ಸಹ ಇದೇ ರೀತಿ ಎರಡು ಪ್ರಕರಣಗಳು ದಾಖಲಾಗಿದ್ದವು. ಸದ್ಯ ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಹಲವು ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಹಿಂದೆ ಆರ್ಬಿಐ ಬ್ಯಾಂಕ್ ಹೆಸರಲ್ಲಿ ವಂಚನೆ ಪ್ರಕರಣ ನಡೆದಿತ್ತು:ಆರ್ಬಿಐ ಬ್ಯಾಂಕ್ನ ಲಾಂಛನದ ಕಾಗದ, ಸೀಲ್ ಹಾಗೂ ಸಿಗ್ನೇಚರ್ಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ಸಾಮಾನ್ಯ ಜನರಿಂದ ಹಣ ಪಡೆದು, ಕೋಟ್ಯಾಂತರ ರೂಪಾಯಿ ನೀಡುವುದಾಗಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಆರೋಪಿಗಳು ನಕಲಿ ದಾಖಲೆಗಳೊಂದಿಗೆ ವಿದೇಶದಿಂದ 75 ಸಾವಿರ ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎಂದು ಬಿಂಬಿಸಿಕೊಂಡು, ಜನರಿಗೆ ಮೋಸ ಮಾಡುತ್ತಿದ್ದರು.
ಅದಷ್ಟೇ ಅಲ್ಲದೆ ಜನರನ್ನು ಬಂಬಿಸಲು ದೆಹಲಿ ಹಾಗೂ ಮುಂಬೈಯಲ್ಲಿರುವ ಆರ್ಬಿಐ ಬ್ಯಾಂಕ್ ಬಳಿ ಫೋಟೋ ಕೂಡ ತೆಗೆದಿಕೊಂಡಿದ್ದರು. ಇದನ್ನೆಲ್ಲ ನಂಬಿ ಜನರು ಹಣದ ಆಸೆಗೆ ಆರೋಪಿಗಳ ಖಾತೆಗೆ ಹಣ ಜಮಾಯಿಸಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಒಬ್ಬ ವ್ಯಕ್ತಿ ಸುಮಾರು 40 ಲಕ್ಷ ರೂ ಜಮೆ ಮಾಡಿದ್ದು, ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಸಂಬಂಧ ಆರೋಪಿಗಳಾದ ಬೆಂಗಳೂರಿನ ಸಿಸಿಬಿ ಪೊಲೀಸರು ಅಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್ ಕುಮಾರ್, ಗಂಗರಾಜು, ಕುಮಾರೇಶ್, ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಅವರನ್ನು ಬಂಧಿಸಿದ್ದರು. ಅವರಿಂದ 11.50 ಲಕ್ಷ್ ನಗದು ಹಾಗೂ ಬ್ಯಾಂಕ್ನಲ್ಲಿದ್ದ 16 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಖೋಟಾನೋಟು ಮುದ್ರಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಆಂಧ್ರ ಗ್ಯಾಂಗ್ ಅರೆಸ್ಟ್...