ಬೆಂಗಳೂರು: ನೋಟು ಬ್ಯಾನ್ ಬಳಿಕ ಖೋಟಾನೋಟು ಜಾಲದಲ್ಲಿ ಬಂಧಿತೆಯಾಗಿದ್ದ ಮಹಿಳೆಗೆ ಎನ್ಐಎ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದೆ. 53 ವರ್ಷದ ಜೆ.ವನಿತಾ ಆಲಿಯಾಸ್ ತಂಗಂ ರಾಮಚಂದ್ರಪುರ ಎಂಬಾಕೆ ಸುದೀರ್ಘ ವಿಚಾರಣೆ ವೇಳೆ ನಕಲಿ ನೋಟು ಸರಬರಾಜು ಮಾಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ತೀರ್ಪು ನೀಡಿದ್ದು ನಾಳೆ ಶಿಕ್ಷೆ ಪ್ರಮಾಣ ಘೋಷಿಸಿದೆ.
ನೋಟು ಅಮಾನ್ಯಿಕರಣ ವೇಳೆ 2 ಸಾವಿರ ಮುಖಬೆಲೆಯ 6.40 ಲಕ್ಷ ಹಣವನ್ನ ಸಾಗಾಟ ಹಿನ್ನೆಲೆಯಲ್ಲಿ 2018 ಆಗಸ್ಟ್ ನಲ್ಲಿ ಮಾದನಾಯಕಹಳ್ಳಿ ಠಾಣೆ ಪೊಲೀಸರು ವನಿತಾಳನ್ನ ಬಂಧಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನನ್ನ ಅದೇ ವರ್ಷ ಸೆಪ್ಟೆಂಬರ್ ನಲ್ಲಿ ಎನ್ಐಎಗೆ ಹಸ್ತಾಂತರಿಸಲಾಗಿತ್ತು.